Home Advertisement
Home ಕ್ರೀಡೆ IPL 2026: ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌

IPL 2026: ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌

0
34

ಧರ್ಮಶಾಲಾ: ಐಪಿಎಲ್‌ ಪಂದ್ಯಾವಳಿಯ 61ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪಂಜಾಬ್‌ ಕಿಂಗ್ಸ್‌ ಟಾಸ್‌ನಲ್ಲಿ ಗೆಲುವು ಸಾಧಿಸಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ.

ಪ್ರಸ್ತುತ ಅಂಕಪಟ್ಟಿಯಲ್ಲಿ 12 ಪಂದ್ಯಗಳಿಂದ 8 ಜಯ ಸಾಧಿಸಿರುವ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ. ಮುಂಬೈ ಮತ್ತು ಕೋಲ್ಕತಾ ವಿರುದ್ಧ ಸತತ ಗೆಲುವು ದಾಖಲಿಸಿ ಉತ್ತಮ ಫಾರ್ಮ್‌ನಲ್ಲಿರುವ ಬೆಂಗಳೂರು ತಂಡಕ್ಕೆ ಇಂದು ಗೆದ್ದರೆ ಪ್ಲೇ-ಆಫ್ ಸ್ಥಾನ ಅಧಿಕೃತವಾಗಲಿದೆ.

ರನ್ ಮೆಷಿನ್ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಬೇಟೆಯಾಡುತ್ತಿದ್ದು, ತಂಡದ ಬಲ ಹೆಚ್ಚಿಸಿದ್ದಾರೆ. ನಾಯಕ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಮತ್ತೊಂದು ಜಯದ ತವಕದಲ್ಲಿದೆ.

ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲುಗಳೊಂದಿಗೆ ಪಂಜಾಬ್ 13 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.

ಆರಂಭದಲ್ಲಿ ಸತತ 6 ಪಂದ್ಯ ಗೆದ್ದಿದ್ದ ಪಂಜಾಬ್, ನಂತರ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿ ಭಾರಿ ಹಿನ್ನಡೆ ಅನುಭವಿಸಿದೆ. ಪ್ಲೇ-ಆಫ್ ಆಸೆ ಜೀವಂತವಾಗಿಡಬೇಕಾದರೆ ಪಂಜಾಬ್ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.