SK Home Ad
Home ಸುದ್ದಿ ಪ್ರಧಾನಿ ಮೋದಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ: ರಸಗೊಬ್ಬರ ಬುಕ್ಕಿಂಗ್ ಸರತಿ ಸಾಲಿನ ಕಿರಿಕಿರಿಯಿಂದ ಮುಕ್ತಿ!

ಪ್ರಧಾನಿ ಮೋದಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ: ರಸಗೊಬ್ಬರ ಬುಕ್ಕಿಂಗ್ ಸರತಿ ಸಾಲಿನ ಕಿರಿಕಿರಿಯಿಂದ ಮುಕ್ತಿ!

0
70

ರಸಗೊಬ್ಬರ ಖರೀದಿಗಾಗಿ ಕೃಷಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇನ್ನು ಮುಂದೆ ರೈತರು ತಮ್ಮ ಮೊಬೈಲ್ ಮೂಲಕವೇ ಅಗತ್ಯ ರಸಗೊಬ್ಬರವನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.

ದೇಶಾದ್ಯಂತ  ಪ್ರಾಯೋಗಿಕ ವಾಗಿ  ಜಾರಿಗೊಳಿಸಲು ಸಜ್ಜಾಗಿದ್ದ ಈ ಯೋಜನೆಗೆ ಕರ್ನಾಟಕದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಡಿ.15 ರಿಂದ ರಾಜ್ಯದವುದ್ದಕ್ಕೂ ವಿಸ್ತರಿಸಲು ಉದ್ದೇಶಿಸಲಾಗಿದೆ.

ಬುಕ್ಕಿಂಗ್‌ ಹೇಗೆ ?

ರೈತರು ತಮ್ಮ ಮನೆಯಲ್ಲಿಯೆ ಕುಳಿತುಕೊಂಡು ಆಂಡ್ರಾಯ್ಡ ಮೊಬೈಲ್‌ ನಲ್ಲಿ ಫ್ರೇಮ್‌ ವರ್ಕ ಫರ್ಟಿಲೈಸರ್‌ ಸೇಲ್‌ (ಎಫ್‌ ಎಫ್‌ ಎಸ್)‌ ಅಪ್ಲಿಕೇಶನ ಡೌನಲೋಡ್‌ ಮಾಡಿಕೊಂಡು  ಆಧಾರ್‌ ಸಂಖ್ಯೆ ಅಥವಾ ಎಫ್‌ಐಡಿ ನಮೂದಿಸಿ ಒಟಿಪಿ ಮೂಲಕ ದೃಢೀಕರಿಸಬೇಕು. ನಂತರ ಭೂ ಹಿಡುವಳಿ ಮತ್ತು ಬೆಳೆ ವಿವರಗಳ ಆಧಾರದಲ್ಲಿ ಹತ್ತಿರದ ಮಳಿಗೆಯಿಂದ ಅಗತ್ಯವಿರುವ ಗೊಬ್ಬರದ ಪ್ರಮಾಣ ಹಾಗೂ ಪ್ರಕಾರ ಅಯ್ಕೆ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಕ್ಯೂ ಆರ್‌ ಕೋಡ್‌  ದೊರೆಯಲಿದ್ದು ಅದನ್ನು 3 ದಿನಗಳೊಳಗೆ ತೋರಿಸಿ ಗೊಬ್ಬರ ಖರೀದಿಸಬಹುದು.

ಸ್ಮಾರ್ಟ್‌ಫೋನ್ ಇಲ್ಲದ ರೈತರಿಗೂ ನೆರವು

ಸ್ಮಾರ್ಟ್‌ಫೋನ್ ಬಳಸದ ಅಥವಾ ಆ್ಯಪ್ ಮೂಲಕ ಬುಕ್ಕಿಂಗ್ ಮಾಡಲು ಸಾಧ್ಯವಾಗದ ರೈತರು ಸಾಮಾನ್ಯ ಸೇವಾ ಕೇಂದ್ರಗಳು (CSC), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS), ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಸಹಾಯಕ ಸಿಬ್ಬಂದಿಯ ನೆರವು ಪಡೆಯಬಹುದು.

ಒಟ್ಟಿನಲ್ಲಿ, ಎಫ್‌ಎಫ್‌ಎಸ್ ಆ್ಯಪ್ ಮೂಲಕ ರಸಗೊಬ್ಬರ ಬುಕ್ಕಿಂಗ್ ವ್ಯವಸ್ಥೆ ರೈತರ ಸಮಯ ಉಳಿಸುವುದರ ಜತೆಗೆ ಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗುವ ನಿರೀಕ್ಷೆಯಿದೆ. ಆದರೆ ಈ ವ್ಯವಸ್ಥೆಯ ಅನುಷ್ಠಾನ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಹಂತ ಹಂತವಾಗಿ ನಡೆಯಲಿದೆ.