SK Home Ad
Home ಸುದ್ದಿ ಬಡವರಿಗೆನಿವೇಶನಭಾಗ್ಯ ; ನಮ್ಮಮನೆಯೋಜನೆಯಡಿನಿವೇಶನಹಂಚಿಕೆಗೆಸರ್ಕಾರದನಿರ್ಧಾರ

ಬಡವರಿಗೆನಿವೇಶನಭಾಗ್ಯ ; ನಮ್ಮಮನೆಯೋಜನೆಯಡಿನಿವೇಶನಹಂಚಿಕೆಗೆಸರ್ಕಾರದನಿರ್ಧಾರ

0
7

ಸ್ವಂತ ಮನೆ ನಿರ್ಮಿಸಿಕೊಳ್ಳುವ ಕನಸು ಕಾಣುತ್ತಿರುವ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಅರ್ಹ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಮ್ಮ ಮನೆ ಯೋಜನೆಯಡಿ 93,240 ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸಭೆಯಲ್ಲಿ ರಾಜ್ಯದ ವಸತಿ ರಹಿತರು ಹಾಗೂ ಶ್ರಮಿಕ ವರ್ಗಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಹತ್ವಾಕಾಂಕ್ಷಿ ನಮ್ಮ ಮನೆ ಯೋಜನೆ ಯಡಿಯಲ್ಲಿ  ರಾಜ್ಯಾದ್ಯಂತ  ಒಟ್ಟು 93,240 ನಿವೇಶನಗಳನ್ನು 30/40 ಅಳತೆಯ  ಬೃಹತ್‌ ಕಾರ್ಯಕ್ರಮ ಅನುಷ್ಠಾನಗೊಳಿಸಲು   ಸಚಿವ ಸಂಪುಟ ಸಭೆ ಮಹತ್ವದ ಅನುಮೋದನೆ  ನೀಡಿದೆ.

ಸ್ವಂತ ಜಮೀನು ಅಥವಾ ನಿವೇಶನ ಇಲ್ಲದೆ ಮನೆ ನಿರ್ಮಾಣಕ್ಕಾಗಿ ಪರದಾಡುತ್ತಿರುವ ಕುಟುಂಬಗಳಿಗೆ ಈ ಯೋಜನೆ ನೆರವಾಗುವ ನಿರೀಕ್ಷೆಯಿದೆ.

 ಒಟ್ಟು ₹11,650 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ವಸತಿ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ನಿವೇಶನ ಒದಗಿಸುವ ಮೂಲಕ ಮನೆ ನಿರ್ಮಾಣಕ್ಕೆ ಅನುಕೂಲ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಈ ನಿರ್ಧಾರದಿಂದ ಸಾವಿರಾರು ಕುಟುಂಬಗಳ ಸ್ವಂತ ಮನೆಯ ಕನಸು ನನಸಾಗುವ ನಿರೀಕ್ಷೆ ಮೂಡಿದೆ. ಆದರೆ ನಿವೇಶನ ಹಂಚಿಕೆಯ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಹಾಗೂ ಅರ್ಜಿ ಸಲ್ಲಿಕೆಯ ಕುರಿತು ಸರ್ಕಾರದ ಅಧಿಕೃತ ಮಾರ್ಗಸೂಚಿ ಮತ್ತು ಮುಂದಿನ ಪ್ರಕಟಣೆಗಳನ್ನು ಗಮನಿಸಬೇಕಿದೆ.