Home Advertisement
Home ಆರೋಗ್ಯ ಅಪಾಯಕಾರಿ ಬಿಸಿಲಿನಿಂದ ರಕ್ಷಣೆ ಪಡೆಯಲು ಸರಳ ಮಾರ್ಗಗಳು

ಅಪಾಯಕಾರಿ ಬಿಸಿಲಿನಿಂದ ರಕ್ಷಣೆ ಪಡೆಯಲು ಸರಳ ಮಾರ್ಗಗಳು

0
86

ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚಾಗುತ್ತ ಸಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬಿಸಿಲಿನ ಶಾಖಕ್ಕೆ ಜನರು ಬಲಿಯಾದ ಬಗ್ಗೆ ವರದಿಗಳು ಆಗಿವೆ. ಹೀಗಿರುವಾಗ ನಾವು ಬಿಸಿಲಿನಿಂದ ರಕ್ಷಣೆ ಪಡೆಯುವುದು ಅತ್ಯಂತ ಅವಶ್ಯವಾಗಿದೆ. ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾದರೆ ಒಂದಿಷ್ಟು ಮುನ್ನೆಚ್ಚರಿಕಾ ತಯಾರಿಗಳನ್ನು ಮಾಡಿಕೊಳ್ಳಲೇಬೇಕು.

ಮುಖ್ಯವಾಗಿ ಬೇಸಿಗೆಯ ಬಿಸಿಲಿನಲ್ಲಿ ಶಾಖದ ಹೊಡೆತ (Heat Stroke) ಮತ್ತು ನಿರ್ಜಲೀಕರಣ (Dehydration) ಎನ್ನುವ ಎರಡು ಸಾಮಾನ್ಯ ಮತ್ತು ಅಪಾಯಕಾರಿ ಸಮಸ್ಯೆಗಳು ಕಂಡುಬರುತ್ತವೆ. ಬಿಸಿಲಿನಲ್ಲಿ ತಾಪಮಾನ ಹೆಚ್ಚಿದಂತೆ ಇವುಗಳು ದೇಹದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ.

ಬೇಸಿಗೆಯ ದಿನಗಳಲ್ಲಿ ಈ ಎರಡು ಸಾಮಾನ್ಯ ಮತ್ತು ಅಪಾಯಕಾರಿ ಸಮಸ್ಯೆಯನ್ನು ತಂದೊಡ್ಡುತ್ತವೆ. ಹೀಗಾಗಿ ಇವುಗಳ ಮಾಹಿತಿಯನ್ನು ಅವಶ್ಯವಾಗಿ ಪಡಿಯಬೇಕು. ಇದರಲ್ಲಿ ಶಾಖದ ಹೊಡೆತ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಅತ್ಯಂತ ಗಂಭೀರ ಸ್ಥಿತಿಯನ್ನು ತರುತ್ತದೆ.

ನಿರ್ಜಲೀಕರಣದ ಲಕ್ಷಣಗಳು (Dehydration Symptoms): ದೇಹದಲ್ಲಿ ನೀರಿನ ಅಂಶ ಕುಂದಿದಾಗ ನಿರ್ಜಲೀಕರಣ ಉಂಟಾಗುತ್ತದೆ. ದೇಹಕ್ಕೆ ಅಗತ್ಯವಿರುವ ದ್ರವಕ್ಕಿಂತ ಕಡಿಮೆ ಮಟ್ಟದ ದ್ರವ ದೇಹದಲ್ಲಿದ್ದಾಗ ಇದು ಸಂಭವಿಸುವುದು. ಈ ಸಮಯದಲ್ಲಿ ಅಸಮತೋಲನವಾಗಿ ದೇಹದ ಮೇಲೆ ಪರಿಣಾಮ ಕಂಡು ಬರುತ್ತದೆ.

ವಿಪರೀತ ಬಾಯಾರಿಕೆಯಾಗುವುದು. ತುಟಿಗಳು ಒಣಗುವುದು. ಗಾಢ ಹಳದಿ ಬಣ್ಣದ ಮೂತ್ರ, ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ. ದೇಹದಲ್ಲಿ ಸಂಪೂರ್ಣ ದಣಿವು, ತಲೆತಿರುಗುವಿಕೆಯ ಲಕ್ಷಣಗಳು ಈ ಸಂದರ್ಭದಲ್ಲಿ ಕಂಡುಬರುತ್ತವೆ.

ಶಾಖದ ಹೊಡೆತದ ಲಕ್ಷಣಗಳು (Heat Stroke Symptoms): ಸಾಮಾನ್ಯ ಉಷ್ಣತೆಗಿಂತ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು. 104°F (40°C) ಅಥವಾ ಅದಕ್ಕಿಂತ ಹೆಚ್ಚಾದಾಗ ದೇಹವನ್ನು ಸಾಮಾನ್ಯ ಉಷ್ಣತೆಗೆ ತರಲು ಉಂಟಾಗುವ ವೈದ್ಯಕೀಯ ತುರ್ತುಸ್ಥಿತಿ ಇದಾಗಿದೆ.

ದೇಹದಲ್ಲಿ ವಿಪರೀತ ಉಷ್ಣತೆ ಹೆಚ್ಚಾಗುವುದು. ಜ್ವರ ಕಾಣಿಸಿಕೊಳ್ಳುವುದು. ಬೆವರು ಇರದೇ ಚರ್ಮವು ಬಿಸಿಯಾಗಿ ಮತ್ತು ಒಣಗುವುದು. ಮಾತಿನಲ್ಲಿ ತೊದಲುವಿಕೆ, ಇದ್ದಕ್ಕಿಂದ ದೇಹದ ನಿಯಂತ್ರಣ ತಪ್ಪುವುದು. ಹೃದಯ ಬಡಿತ, ಉಸಿರಾಟದಲ್ಲಿ ಏರುಪೇರು ಕಂಡುಬುರುವುದು ಇದರ ಮುಖ್ಯ ಲಕ್ಷಣವಾಗಿದೆ.

ಸುರಕ್ಷತೆಗೆ ಉತ್ತಮ ಮಾರ್ಗ:
ಬಿಸಿಲಿನ ತೀವ್ರತೆ ಹೆಚ್ಚಾದಾಗ ಹೊರಗಡೆ ಸಂಚರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ.
ಒಳಾಂಗಣದಲ್ಲಿ ಇದ್ದರೂ ಕೂಡ ಅಗತ್ಯ ಗಾಳಿಯ ವ್ಯವಸ್ಥೆ ಇರುವ ಪ್ರದೇಶದಲ್ಲಿ ಇರಬೇಕು.
ಬಾಯಾರಿಕೆ ಆಗುವವರೆಗೆ ಕಾಯದೇ ನೀರನ್ನು ನಿಯಮಿತವಾಗಿ ಕುಡಿಯಬೇಕು.
ಬೇಸಿಗೆ ಕಾಲದ ಆಹಾರವನ್ನು ಸೇವಿಸಿ, ಅನಗತ್ಯವಾಗಿ ದೇಹಕ್ಕೆ ತೊಂದರನ್ನುಂಟು ಮಾಡುವ ಆಹಾರದಿಂದ ದೂರವಿರಿ.
ಹೆಚ್ಚಾಗಿ ನೀರು, ಎಳನೀರು ಮತ್ತು ಹಣ್ಣಿನ ರಸವನ್ನು ಕುಡಿಯುವುದು ದೇಹಕ್ಕೆ ಉತ್ತಮ.
ಮಧ್ಯಾಹ್ನದ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳಿಂದ ದೂರ ಉಳಿಯವುದು ಲೇಸು.
ದೇಹದ ಉಷ್ಣತೆ ನಿಯಂತ್ರಿಸುವ ಬಟ್ಟೆಗಳನ್ನು ಧರಿಸಿವುದು ಒಳ್ಳೆಯದು.
ದೇಹದಲ್ಲಿ ಕೊಂಚ ವ್ಯತ್ಯಾಸ ಕಂಡುಬಂದರೆ, ತಕ್ಷಣ ವಿಶ್ರಾಂತಿಯನ್ನು ಪಡೆಯಬೇಕು. ಸ್ಥಳೀಯ ವೈದ್ಯರನ್ನು ಭೇಟಿ ಮಾಡಿ.