SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಜೋಗ ಜಲಪಾತದಲ್ಲಿ ರೀಲ್ಸ್: ಮೂವರ ವಿರುದ್ಧ ಸುಮುಟೋ ಕೇಸ್

ಜೋಗ ಜಲಪಾತದಲ್ಲಿ ರೀಲ್ಸ್: ಮೂವರ ವಿರುದ್ಧ ಸುಮುಟೋ ಕೇಸ್

0
37

ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ ಜಲಪಾತದ ನಿಷೇಧಿತ ಪ್ರದೇಶಕ್ಕೆ ತೆರಳಿ ಅಪಾಯಕಾರಿ ವಿಡಿಯೋ ಚಿತ್ರೀಕರಣದ ವಿಚಾರವಾಗಿ ತೀರ್ಥಹಳ್ಳಿಯ ಮೂವರು ಯುವಕರ ವಿರುದ್ಧ ಉತ್ತರ ಕನ್ನಡದ ಸಿದ್ದಾಪುರ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ವ್ಯಾಪ್ತಿಗೆ ಜೋಗ ಜಲಪಾತದ ರಾಜಾ ಫಾಲ್ಸ್‌ ಸೇರುತ್ತದೆ. ಈ ಪ್ರದೇಶ ತುಂಬಾ ಅಪಾಯಕಾರಿ. ಹಾಗಾಗಿ ಅಲ್ಲಿಗೆ ತೆರಳಲು ಯಾರಿಗೂ ಅವಕಾಶವಿಲ್ಲ. ಆ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಿ, ವಿಡಿಯೋ ಹರಿಬಿಟ್ಟ ಆರೋಪದ ಮೇರೆಗೆ ತೀರ್ಥಹಳ್ಳಿಯ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಎರಡು ವಿಡಿಯೋಗಳು ಪೋಸ್ಟ್ ಆಗಿತ್ತು. ಜೋಗ ಜಲಪಾತದ ನೀರು ಕೆಳಗೆ ಬೀಳುವ ಜಾಗ ಎಂಬ ಟೈಟಲ್ ಇದ್ದ ಈ ವಿಡಿಯೋದಲ್ಲಿ ಜೋಗ ಫಾಲ್ಸ್ ಎಷ್ಟು ಎತ್ತರದಿಂದ ನೀರು ಬೀಳುತ್ತದೆ, ಕೆಳಗಡೆ ಫುಲ್ ಪ್ರಪಾತ ಗಾಯ್ಸ್, ಫುಲ್ ಹೆದರಿಕೆ, ನೆಕ್ಸ್ಟ್‌ ಲೆವೆಲ್ ವೀವ್ಸ್ ಗಾಯ್ಸ್ ಎಂದು ಹೇಳುತ್ತಾ ರಾಜಾ ಫಾಲ್ಸ್ ಸೇರಿದಂತೆ ಅಲ್ಲಿನ ಅಪಾಯಕಾರಿ ಸ್ಥಳದಲ್ಲಿ ಓಡಾಡಿ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಅದನ್ನು ಅಪ್‌ಲೋಡ್ ಮಾಡಿದ್ದರು.

ರಾಜಾ ಜಲಪಾತದ ಕಲ್ಲಿನ ಬಂಡೆಯ ತುದಿಗೆ ಮೂವರು ವ್ಯಕ್ತಿಗಳು ತೆರಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮಾವಿನಗುಂಡಿ ಸಮೀಪದ ಬ್ರಿಟಿಷ್ ಬಂಗಲೆ ಬಳಿ ಇರುವ ಅಪಾಯಕಾರಿ ಸ್ಥಳಕ್ಕೆ ತೆರಳುವುದು ಹಾಗೂ ಜಲಪಾತದ ತುದಿಗೆ ತೆರಳುವುದು ಮಾನವ ಜೀವಕ್ಕೆ ಹಾಗೂ ವೈಯಕ್ತಿಕ ಸುರಕ್ಷತೆಗೆ ತೀವ್ರ ಹಾನಿ ತರುವ ಅಪಾಯಕಾರಿ ಕೃತ್ಯ. ಈ ಸ್ಥಳಗಳಿಗೆ ಹೋಗದಂತೆ ಸೂಚನಾ ಫಲಕ ಹಾಗೂ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.