SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಬರಲಿದೆ

ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಬರಲಿದೆ

0
39

ಶಿವಮೊಗ್ಗ: ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಬರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ನೀಡಲಿ. ಅದನ್ನು ಬಿಟ್ಟು ಗ್ರಾಹಕರಿಗೆ ಬರೆ ಹಾಕುವುದು ಬೇಡ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಗ್ರಾಹಕರಿಗೆ ಯಾವುದೇ ಹೊರೆ ಹಾಕಿರಲಿಲ್ಲ. ಈಗಾಗಲೇ ಮದ್ಯದ ದರ, ಮೆಟ್ರೋ ದರ, ಬಸ್ ಪ್ರಯಾಣದ ದರ ಹೆಚ್ಚಿಸಿದ್ದಾರೆ ಎಂದರು.

ಬಿಜೆಪಿಗರನ್ನು ಜೈಲಿಗೆ ಕಳಿಸುವುದಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಜೈಲಿಗೆ ಕಳಿಸುತ್ತಾರೋ ಕಳಿಸಲಿ. ಬ್ಲ್ಯಾಕ್‌ಮೇಲ್ ಮಾಡುವುದು ಬೇಡ. ಅವರಿಗೆ ಹೆದರಿ ಕೂರುವವರು ಇಲ್ಲಿ ಯಾರೂ ಇಲ್ಲ ಎಂದರು.

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇರ ಮಾತುಕತೆಗೆ ಪಂಥಾಹ್ವಾನ ನೀಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಮೊದಲು ಸಂಸತ್ ಕಲಾಪದಲ್ಲಿ ಸರಿಯಾಗಿ ಪಾಲ್ಗೊಳ್ಳಲಿ ಎಂದು ರಾಹುಲ್‌ಗೆ ಸಲಹೆ ನೀಡಿದರು.