SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಬಂಗಾರಪ್ಪ ಬಿಜೆಪಿಗೆ ಬಂದ ಮೇಲೆಯೇ ಬಿಎಸ್‌ವೈ, ಈಶ್ವರಪ್ಪ ರಾಜಕೀಯವಾಗಿ ಬದುಕಿದ್ದು

ಬಂಗಾರಪ್ಪ ಬಿಜೆಪಿಗೆ ಬಂದ ಮೇಲೆಯೇ ಬಿಎಸ್‌ವೈ, ಈಶ್ವರಪ್ಪ ರಾಜಕೀಯವಾಗಿ ಬದುಕಿದ್ದು

0
2

ಶಿಕಾರಿಪುರ: ಸೊರಬದಲ್ಲಿ ಗೆದ್ದು ಬನ್ನಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ತಾವು ಹೇಗೆ ಗೆದ್ದು ಬಂದಿದ್ದೀರಿ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ನಮ್ಮ ತಂದೆ (ದಿ. ಬಂಗಾರಪ್ಪ) ಅವರು ಬಿಜೆಪಿಗೆ ಬಂದ ಮೇಲೆ ಬಿಎಸ್‌ವೈ, ಕೆಎಸ್‌ಇ ರಾಜಕೀಯವಾಗಿ ಬದುಕಿದ್ದು, 2009ರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತು ಎಂದರು.

ಚುನಾವಣೆ ಆಯೋಗ 13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು..? ದೇಶದ ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿ, ಒಂದು ದೇಶದಲ್ಲಿ ಎಂತಹ ದೊಡ್ಡ ಆತಂಕ ಎದುರಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನಿಸಿದರು.

ಝನ್ ಜಿ ಯುವಕರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಬೇಕು. ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ಮುಂದೆ ಎಲ್ಲರೂ ನಂಬಿಕೆ ಕಳೆದುಕೊಳ್ಳುವ ದಿನಗಳು ಬರಬಹುದು ಎಂಬ ಆತಂಕ ನಮಗಿದೆ ಎಂದರು.