ಶಿವಮೊಗ್ಗ: ಪಕ್ಷದ ಇಬ್ಬರು ನಾಯಕರ ನಡುವೆ ಭಿನ್ನಭಿಪ್ರಾಯ ಸೃಷ್ಟಿಸಿ ಅದರ ಲಾಭ ಪಡೆಯಲು ಷಡ್ಯಂತ್ರ ರೂಪಿಸಿದ ಮಹಾನ್ ನಾಯಕನೇ ಉರುಳಿನಲ್ಲಿ ಬೀಳಲಿದ್ದಾನೆ ಎಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಹೇಳಿದರು.
ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಅವರು, ಅಲ್ಲೋಲ ಕಲ್ಲೋಲ ಪ್ರಶ್ನೆ ಎತ್ತಿದ ಮಹಾನ್ ನಾಯಕ ಯಾವತ್ತು ಪ್ರಶ್ನೆ ಮಾಡಿದರು, ಅಮೆರಿಕದಿಂದ ಬಂದು ಏನ್ ಮಾತನಾಡಿದ್ದರು. ಅವರು ಮಾತನಾಡಿದಾಗ ಅದರ ಹಿನ್ನೆಲೆ ಏನಿತ್ತು. ಇವತ್ತು ಎಲ್ಲಿಗೆ ಸಾಗಿದೆ. ಮಾಧ್ಯಮಗಳಲ್ಲಿ ದೆಹಲಿಯಲ್ಲಿ ಏನ್ ನಡೆಯುತ್ತಿದೆ ಎಂದು ಬರುತ್ತಿದೆ.
ನನಗೆ ತನಿಖೆ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದನ್ನು ನೋಡಿ ನಾನು ಮಾತನಾಡುತ್ತಿದ್ದೇನೆ. ಈಗ ತನಿಖೆ ಬೆಟ್ಟು ಮಾಡಿ ಯಾರ ಮನೆಗೆ ಹೋಗಿದೆ. ಅದು ತಪ್ಪಾಗಿದ್ದರೆ, ಅದಕ್ಕೆ ಸಮಜಾಯಿಷಿ ನೀಡಲಿ ಎಂದರು.
ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದ್ರೆ ಮೊದಲು ಯಾರ ಮನೆ ಹಾಳಾಗುತ್ತದೆ. ಈಗ ಪ್ರಕರಣ ತನಿಖೆಯಲ್ಲಿದೆ. ಈಗ ನಾನು ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂಬುದು ನನ್ನ ಭಾವನೆ. ಯಾವುದಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬುದನ್ನು ಗೃಹ ಸಚಿವರು ತಿಳಿಸುತ್ತಾರೆ ಎಂದು ಹೇಳಿದರು.






















