SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತ

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತ

0
280

ಆಗುಂಬೆ (ಶಿವಮೊಗ್ಗ ಜಿಲ್ಲೆ): ಪಶ್ಚಿಮಘಟ್ಟದ ಪ್ರಸಿದ್ಧ ಆಗುಂಬೆ ಘಾಟಿಯಲ್ಲಿ ಭಾರೀ ಮರವೊಂದು ರಸ್ತೆ ಮಧ್ಯೆ ಬಿದ್ದ ಪರಿಣಾಮ ತೀರ್ಥಹಳ್ಳಿ–ಉಡುಪಿ ನಡುವಿನ ಪ್ರಮುಖ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು.

ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು, ವಾಹನಗಳು ಘಾಟಿಯ ಎರಡೂ ಕಡೆ ಸಿಲುಕಿಕೊಂಡಿದ್ದು, ದೀರ್ಘ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿರುವುದರಿಂದ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಾಗಲಿಲ್ಲ.

ಸ್ಥಳೀಯರ ಪ್ರಯತ್ನ: ಘಟನೆ ನಡೆದ ವೇಳೆ ಘಾಟಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿ ಚಾಲಕರು ಹಾಗೂ ಸ್ಥಳೀಯರು ಸ್ವಯಂಪ್ರೇರಿತವಾಗಿ ಮರ ತೆರವು ಮಾಡಲು ಸಹಕರಿಸಿದ್ದಾರೆ. ಆದರೆ, ಮರದ ಗಾತ್ರ ದೊಡ್ಡದಿರುವುದರಿಂದ ಕಾರ್ಯ ಸುಲಭವಾಗಿರಲಿಲ್ಲ ಅರ್ದ ಗಂಟೆಗಳ ಕಾಲ ಟ್ರಾಫಿಕ್ ವ್ಯತ್ಯಯ ಉಂಟಾಗಿತ್ತು.

ಪರ್ಯಾಯ ಮಾರ್ಗ ಬಳಸಿದ ವಾಹನ ಸವಾರರು : ತೀರ್ಥಹಳ್ಳಿ–ಉಡುಪಿ ಮಾರ್ಗವಾಗಿ ತೆರಳುತ್ತಿದ್ದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಹಿಡಿದರು. ಕೆಲವು ವಾಹನಗಳು ಹಿಂದಿರುಗುತ್ತಿದ್ದರೆ, ಇನ್ನೂ ಕೆಲವರು ಘಾಟಿ ತೆರವುಗೊಳ್ಳುವವರೆಗೆ ಕಾದು ಪ್ರಯಾಣ ಬೆಳಿಸಿದರು.