SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮಗನ ಸಚಿವ ಸ್ಥಾನಕ್ಕಾಗಿ 101 ತೆಂಗಿನಕಾಯಿ ಒಡೆದ ತಂಗಡಗಿ ತಾಯಿ

ಮಗನ ಸಚಿವ ಸ್ಥಾನಕ್ಕಾಗಿ 101 ತೆಂಗಿನಕಾಯಿ ಒಡೆದ ತಂಗಡಗಿ ತಾಯಿ

0
99

ಕೊಪ್ಪಳ(ಕನಕಗಿರಿ): ಮಗನಿಗೆ ಸಚಿವ ಸ್ಥಾನ ದೊರೆಯಲೆಂದು ಪ್ರಾರ್ಥಿಸಿ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ ತಂಗಡಗಿ ಅವರು ಸೋಮವಾರ ಪ್ರಸಿದ್ಧ ಕನಕಗಿರಿಯ ಕನಕಾಚಲಪತಿ ಲಕ್ಷ್ಮೀನರಸಿಂಹ ಸ್ವಾಮಿ ದೇವರಿಗೆ 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.

ಶಿವರಾಜ ತಂಗಡಗಿ ಪತ್ನಿ ವಿದ್ಯಾ ತಂಗಡಗಿ, ಪುತ್ರ ಶಶಾಂಕ್ ತಂಗಡಗಿ, ಕುಟುಂಬದವರು ಪೂಜೆಯಲ್ಲಿ ಭಾಗವಹಿಸಿದ್ದರು. ಮಗನಿಗೆ ಕ್ಷೇತ್ರದ ಜನರ ಆಶೀರ್ವಾದವಿದೆ. ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಸಚಿವನಾಗಿ ಅನೇಕ ಜನಪರ, ಅಭಿವೃದ್ಧಿ ಕಾರ್ಯ ಮಾಡಿದ್ದಾನೆ. ಸಚಿವನಾದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಾನೆ ಎಂದು ಹುಲಿಗೆಮ್ಮ ತಂಗಡಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಮಾಧ್ಯಮ ವಕ್ತಾರ ಶರಣಪ್ಪ ಭತ್ತದ, ಪಪಂ ಉಪಾಧ್ಯಕ್ಷ ಕಂಠೀರಂಗಪ್ಪ ನಾಯಕ, ನಾಮನಿರ್ದೇಶಿತ ಸದಸ್ಯ ಗಂಗಾಧರ ಚೌಡ್ಕಿ, ರವಿ ಪಾಟೀಲ, ರಮೇಶ ಬಡಿಗೇರ ಇದ್ದರು.