ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿದ ನೀರು

ಗೋಕರ್ಣ: ಧಾರಾಕಾರ ಮಳೆಯ ಕಾರಣ ನೀರು ಸರಾಗವಾಗಿ ಹರಿದುಹೋಗದೆ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಗರ್ಭಗುಡಿಯೊಳಗೆ ಮಳೆ ನೀರು ನುಗ್ಗಿ ಅವಾಂತರವಾಗಿದೆ. ಸಂಗಮ ನಾಲಾ ಮೂಲಕ ಸಮುದ್ರ ಸೇರುವ ಸ್ಥಳದಲ್ಲಿ ಬೃಹತ್ ಪ್ರಮಾಣದಲ್ಲಿ ಮರಳು ತುಂಬಿ ದಿಬ್ಬವಾಗಿತ್ತು. ಭಾರಿ ಮಳೆಯಿಂದ ನೀರು ಮುಂದೆ ಹೋಗದೆ ಸೋಮಸೂತ್ರದ ಮೂಲಕ ವಾಪಸ್ ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿತ್ತು. ಇದರಿಂದ ಭಕ್ತರಿಗೆ ಸೋಮವಾರ ದೇವರ ಸ್ಪರ್ಶ ದರ್ಶನಕ್ಕೆ ಸಾಧ್ಯವಾಗಲಿಲ್ಲ. ನಂದಿ ಮಂಟಪದಿಂದ ಹೊರಗಡೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಸಮುದ್ರ ಸೇರುವ ಸಂಗಮ … Continue reading ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿದ ನೀರು