SK Home Ad
Home ನಮ್ಮ ಜಿಲ್ಲೆ ಧಾರವಾಡ 21ನೇ ಶತಮಾನದ ಸವಾಲುಗಳಿಗೆ ಯೋಗವೇ ಶಕ್ತಿ

21ನೇ ಶತಮಾನದ ಸವಾಲುಗಳಿಗೆ ಯೋಗವೇ ಶಕ್ತಿ

0
54

ಹುಬ್ಬಳ್ಳಿ: ಭಗವಂತ ಕೊಟ್ಟಿರುವ ಶಾರೀರಿಕ ಹಾಗೂ ಮಾನಸಿಕ ಸಂಪತ್ತನ್ನು ಸದಾ ಚೈತನ್ಯ ಪೂರಕವಾಗಿಡಲು ಯೋಗ ಒಂದು ಸಾಧನ. ಯೋಗ ಆರೋಗ್ಯಕರವಾದ ದೇಶ, ಆರೋಗ್ಯಕರ ಜಗತ್ತು ನಿರ್ಮಾಣ ಮಾಡುವ ಮೂಲಕ 21ನೇ ಶತಮಾನದ ಎಲ್ಲ ಸವಾಲುಗಳನ್ನು ಎದುರಿಸಲು ಸದೃಢ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಶ್ವ ಯೋಗ ದಿನದ ಅಂಗವಾಗಿ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಯೋಗಾಸನ ಮಾಡಿ ಮಾತನಾಡಿರುವ ಅವರು, ಇಂದು ವಿಶ್ವ ಯೋಗ ದಿನ. ವಿಶ್ವದ ಸುಮಾರು 130 ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ನಿರಂತರ ಯೋಗ ಮಾಡುವುದರಿಂದ ಶಾರೀರಿಕವಾಗಿ ಮಾನಸಿಕವಾಗಿ ಸದೃಢವಾಗಿರುವ ವ್ಯಕ್ತಿತ್ವ ಸ್ಥಾಪನೆ ಮಾಡಬಹುದು. ಇದು ಭಾರತದ ಸನಾತನ ಕಾಲದಿಂದ ಬಂದಿರುವ ಒಂದು ಸಂಸ್ಕೃತಿ. ಈ ಸಂಸ್ಕೃತಿಯಲ್ಲಿ ನಮ್ಮ ಶಾರೀರಿಕ ವಿಚಾರ ತಿಳಿಸುತ್ತದೆ. ಪ್ರಾಣಾಯಾಮ ಮಾಡುವುದರ ಮೂಲಕ ನಮ್ಮ ಪ್ರಾಣ ವಾಯು ಮೇಲೆ ಸಂಪೂರ್ಣ ನಿಯಂತ್ರಣ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ವಿವಿಧ ಯೋಗಾಸನಗಳ ಮೂಲಕ ನಮ್ಮ ಅಂಗಾಗಗಳನ್ನು ಸದೃಢಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ಭಾರತದಲ್ಲಿರುವ ಯೋಗವನ್ನು ಇಡಿ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟು ಎಲ್ಲರಿಗೂ ಮುಟ್ಟಿಸುವ ಕೆಲಸ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ. ಅವರ ಪಭಾವ ಮತ್ತು ಪ್ರಯತ್ನದಿಂದ ಯುಎಸ್. ಯುಎನ್ ದೇಶಗಳು ಈ ದಿನವನು ಯೋಗದಿನವೆಂದು ಗುರುತಿಸಿ ಭಾರತದ ಯೋಗಕ್ಕೆ ಮನ್ನಣೆ ಕೊಟ್ಟಿರುವುದಕ್ಕೆ ಮೋದಿಯವರಿಗೆ ನಾವು ಚಿರ ಋಣಿಯಾಗಿರಬೇಕು. ಶಾಲೆ ಕಾಲೇಜುಗಳಲ್ಲಿ ಯೋಗ ನಿರಂತರವಾಗಿ ನಡೆಯುವ ಮೂಲಕ ಆರೋಗ್ಯಕರವಾದ ದೇಶ, ಆರೋಗ್ಯಕರ ಜಗತ್ತು ನಿರ್ಮಾಣ ಮಾಡುವ ಮೂಲಕ 21ನೇ ಶತಮಾನದ ಎಲ್ಲ ಸವಾಲುಗಳನ್ನು ಎದುರಿಸಲು ಸದೃಢ ಮಾಡುತ್ತಿದೆ. ಎಲ್ಲರೂ ಆರೋಗ್ಯವಾಗಿರುವಂತೆ ಯೋಗ ದಿನದ ಶುಭ ಕೋರಿದರು.