ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ತಂಡ ಕೊನೆಗೂ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಸಂತಸ ವಿಚಾರವನ್ನು ತಿಳಿಸಿದೆ. ಇಷ್ಟು ದಿನ ಕಾರಣಾಂತರಗಳಿಂದ ರೀಲಿಸ್ ದಿನಾಂಕವನ್ನು ಮುಂದು ಹಾಕುತ್ತಲೇ ಬಂದ ʻಟಾಕ್ಸಿಕ್ʼ ತಂಡ, ಇದೀಗ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಹಾಗೇ ವಿಶ್ವ ತಂದೆಯಂದಿರ ದಿನದ ವಿಶೇಷ ಸಂದರ್ಭದಲ್ಲಿ ಚಿತ್ರತಂಡವು ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಬಿಡುಗಡೆಯ ಮಹೂರ್ತವನ್ನು ಖಚಿತಪಡಿಸಿದೆ. ಮಾಸ್ಟರ್ ಮೈಂಡ್ ಯಶ್ ಮೆಗಾ ಪ್ಲಾನ್‌ನಂತೆ, ಚಿತ್ರವು ಸಾಮಾನ್ಯವಾಗಿ ಶುಕ್ರವಾರದ ಬದಲಿಗೆ ಬುಧವಾರ, 26 ಆಗಸ್ಟ್ 2026 ರಂದು ವಿಶ್ವಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಯಶ್ ‘ರಾಯ’ ಮತ್ತು ‘ಟಿಕೆಟ್’ ಎಂಬ ದ್ವಿಪಾತ್ರದ (Double Role) ಖಡಕ್ ಅವತಾರಗಳು ಅನಾವರಣಗೊಂಡಿವೆ. ಈ ಪೋಸ್ಟರ್ ಚಿತ್ರದ ಕರಾಳ, ರೋಮಾಂಚನಕಾರಿ ಮತ್ತು ವಿಶಾಲವಾದ ಭೂಗತ ಜಗತ್ತಿನ ಝಲಕ್‌ನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದು, ಸಿನಿಪ್ರೇಮಿಗಳಲ್ಲಿ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
ಯಶ್ ಮಾನ್‌ಸ್ಟರ್ ಪ್ಲಾನ್: ಸಾಲು ಸಾಲು ಹಬ್ಬಗಳ ರಜಾದಿನಗಳನ್ನು ಗುರಿಯಾಗಿಸಿಕೊಂಡು ಈ ಚಿತ್ರವನ್ನು ಬುಧವಾರವೇ ಬಿಡುಗಡೆ ಮಾಡಲಾಗುತ್ತಿದೆ. ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಸರಣಿ ರಜೆಗಳು ಚಿತ್ರದ ಬಾಕ್ಸ್ ಆಫೀಸ್‌ಗಳಿಕೆಗೆ ದೂಸ್ರಿ ತರಹದ ಮೈಲೇಜ್ ನೀಡಲಿವೆ.
ಒಟ್ಟಾರೆ.. ಭಾರತೀಯ ಚಿತ್ರರಂಗದ ಘಟಾನುಘಟಿ ತಾರಾಗಣವನ್ನು ಹೊಂದಿರುವ ‘ಟಾಕ್ಸಿಕ್’ ಸಿನಿಮಾ, 2026ರ ಅತ್ಯಂತ ದೊಡ್ಡ ಥಿಯೇಟರಿಕಲ್ ಹಬ್ಬವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಬ್ಬಗಳ ಆರ್ಭಟದ ನಡುವೆ ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಲು ಯಶ್ ಪಡೆ ಈಗಿನಿಂದಲೇ ಸಂಪೂರ್ಣವಾಗಿ ಸಜ್ಜಾಗಿದೆ.






















