SK Home Ad
Home ನಮ್ಮ ಜಿಲ್ಲೆ ಧಾರವಾಡ ಪ್ರಯಾಣಿಕರ ಗಮನಕ್ಕೆ: ವಾಸ್ಕೋ-ಕುಲೆಂ ಮಾರ್ಗದ ಎರಡು DEMU ರೈಲುಗಳು ತಾತ್ಕಾಲಿಕ ರದ್ದು

ಪ್ರಯಾಣಿಕರ ಗಮನಕ್ಕೆ: ವಾಸ್ಕೋ-ಕುಲೆಂ ಮಾರ್ಗದ ಎರಡು DEMU ರೈಲುಗಳು ತಾತ್ಕಾಲಿಕ ರದ್ದು

0
33

ಹುಬ್ಬಳ್ಳಿ: ವಾಸ್ಕೋ ಡ ಗಾಮಾ – ಕುಲೆಂ ವಿಭಾಗದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಪ್ರಯಾಣಿಕ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಸಾನ್ವೋರ್ಡೆಂ ಚರ್ಚೋರೆಂ ಯಾರ್ಡ್‌ನಲ್ಲಿ ಟ್ರ್ಯಾಕ್ ದ್ವಿಗುಣಗೊಳಿಸುವಿಕೆಗೆ ಸಂಬಂಧಿಸಿದಂತೆ ಸ್ಲೀಪರ್ ನವೀಕರಣ ಕಾಮಗಾರಿ ನಡೆಯಲಿದ್ದು, ಸೆಪ್ಟೆಂಬರ್ 9 ರಿಂದ ಅಕ್ಟೋಬರ್ 4 ರವರೆಗೆ 26 ದಿನಗಳ ಕಾಲ ಲೈನ್ ಬ್ಲಾಕ್ ಇರಲಿದೆ.

ಈ ಕಾರಣದಿಂದ ವಾಸ್ಕೋ ಡ ಗಾಮಾ – ಕುಲೆಂ DEMU ಸ್ಪೆಷಲ್ (56964) ಮತ್ತು ಕುಲೆಂ – ವಾಸ್ಕೋ ಡ ಗಾಮಾ DEMU ಸ್ಪೆಷಲ್ (56963) ರೈಲುಗಳು ಸೆ. 9ರಿಂದ ಅ. 4ರ ವರೆಗೆ ಸಂಪೂರ್ಣವಾಗಿ ರದ್ದಾಗಿರುತ್ತವೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕಣಮಡಿ ತಿಳಿಸಿದ್ದಾರೆ.