ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಇನ್ನಿಲ್ಲ

ಶಿವಮೊಗ್ಗ: ನಾಟಕ ನಿರ್ದೇಶನ, ರಂಗಶಿಕ್ಷಣ ಹಾಗೂ ಪ್ರಯೋಗಶೀಲ ರಂಗಚಟುವಟಿಕೆಗಳ ಮೂಲಕ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ್ದ ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನರಾಗಿದ್ದಾರೆ. ನೂರಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ನೀಡಿದ್ದ ಅವರು, ಹಲವು ತಲೆಮಾರುಗಳ ರಂಗಕಲಾವಿದರನ್ನು ರೂಪಿಸಿದ ಹಿರಿಯ ರಂಗಗುರುವಾಗಿದ್ದರು. ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದವರಾದ ಜಂಬೆ ಅವರು 1949ರ ಜನವರಿ 3ರಂದು ಜನಿಸಿದ್ದರು. ಕೆಳದಿ, ಸಾಗರದಲ್ಲಿ ಶಿಕ್ಷಣ ಪಡೆದ ಅವರು ಯಕ್ಷಗಾನ ತರಬೇತಿಯನ್ನೂ ಪಡೆದಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಲೇ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡ ಅವರು … Continue reading ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಇನ್ನಿಲ್ಲ