Home Advertisement
Home ಸಿನಿ ಮಿಲ್ಸ್ ದೃಶ್ಯಂ 3: ವಿಜಯ್ ಸಾಳಗಾಂವ್ಕರ್ Vs ಜಾರ್ಜ್ ಕುಟ್ಟಿ – ಎರಡೂ ಭಾಷೆಗಳಲ್ಲಿ ಬೇರೆ ಬೇರೆ...

ದೃಶ್ಯಂ 3: ವಿಜಯ್ ಸಾಳಗಾಂವ್ಕರ್ Vs ಜಾರ್ಜ್ ಕುಟ್ಟಿ – ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಕ್ಲೈಮ್ಯಾಕ್ಸ್?

0
60

Drushyam 3: ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸರಣಿಯಾದ ‘ದೃಶ್ಯಂ’ ಈಗ ಮೂರನೇ ಭಾಗದೊಂದಿಗೆ ಅಬ್ಬರಿಸಲು ಸಿದ್ಧವಾಗಿದೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ‘ದೃಶ್ಯಂ 3’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದ್ರೆ ಇದರ ಹಿಂದಿ ರಿಮೇಕ್ ಮಲಯಾಳಂ ಆವೃತ್ತಿಗಿಂತ ಸಾಕಷ್ಟು ಭಿನ್ನವಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬದಲಾವಣೆಗೆ ಕಾರಣವೇನು?: ಮೂಲ ಮಲಯಾಳಂ ಸರಣಿಯ ಸೃಷ್ಟಿಕರ್ತ ಜೀತು ಜೋಸೆಫ್ ಪ್ರಕಾರ, ‘ದೃಶ್ಯಂ 3’ ಒಂದು ಎಮೋಷನಲ್ ಫ್ಯಾಮಿಲಿ ಡ್ರಾಮಾ ಆಗಿರಲಿದೆ. ಆ ಒಂದು ಹಳೆಯ ಕೊಲೆಯಿಂದ ಜಾರ್ಜ್ ಕುಟ್ಟಿಯ ಕುಟುಂಬ ಎದುರಿಸುವ ಮಾನಸಿಕ ಸಂಘರ್ಷಗಳ ಮೇಲೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಆದ್ರೆ ಹಿಂದಿ ಚಿತ್ರತಂಡವು ಅಜಯ್ ದೇವಗನ್ ‘ಮಾಸ್ ಇಮೇಜ್‌ಗೆ ತಕ್ಕಂತೆ ಚಿತ್ರಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಹಿಂದಿಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳ ಜೊತೆಗೆ ನಾಯಕ ವಿಜಯ್ ಸಾಳಗಾಂವ್ಕರ್ ತನ್ನ ಬುದ್ಧಿವಂತಿಕೆಯಿಂದ ಕುಟುಂಬವನ್ನು ರಕ್ಷಿಸುವ ಸಾಹಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.

ಬಿಡುಗಡೆಯ ದಿನಾಂಕದಲ್ಲಿ ಗೊಂದಲ: ಮಲಯಾಳಂ ಮತ್ತು ಹಿಂದಿ ಎರಡೂ ಆವೃತ್ತಿಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಈ ಹಿಂದೆ ಯೋಜಿಸಲಾಗಿತ್ತು. ಆದ್ರೆ ಕಥೆಯಲ್ಲಾದ ಬದಲಾವಣೆಗಳು ಮತ್ತು ತಂಡಗಳ ನಡುವಿನ ಒಪ್ಪಂದದ ಕಾರಣದಿಂದಾಗಿ ಬಿಡುಗಡೆ ತಡವಾಗಿದೆ. ಮಲಯಾಳಂ ಆವೃತ್ತಿಯು ಇದೇ ತಿಂಗಳು 21 ರಂದು ತೆರೆಕಾಣುತ್ತಿದ್ದರೆ, ಅಜಯ್ ದೇವಗನ್ ನಟನೆಯ ಹಿಂದಿ ‘ದೃಶ್ಯಂ 3’ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಒಟ್ಟಾರೆ… ಮೊದಲ ಎರಡು ಭಾಗಗಳಲ್ಲಿ ಮೂಲ ಕಥೆಯನ್ನೇ ಅನುಸರಿಸಿದ್ದ ಹಿಂದಿ ಚಿತ್ರತಂಡ, ಈ ಬಾರಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಿದ್ಧತೆ ನಡೆಸಿದೆ. ‘ದೃಶ್ಯಂ 3’ ಸರಣಿಯ ಅಂತಿಮ ಭಾಗವಾಗುವ ಸಾಧ್ಯತೆಯೂ ಇರುವುದರಿಂದ ಕುತೂಹಲ ದುಪ್ಪಟ್ಟಾಗಿದೆ.