Home Advertisement
Home ನಮ್ಮ ಜಿಲ್ಲೆ ಕೊಪ್ಪಳ ರಾಜಕಾರಣಿಗಳು ಸ್ವಾರ್ಥ ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದು

ರಾಜಕಾರಣಿಗಳು ಸ್ವಾರ್ಥ ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದು

0
109

ಕೊಪ್ಪಳ: ರಾಜಕಾರಣಿಗಳು ಸಾರ್ವಜನಿಕರ ಬದುಕಿಗೆ ಸ್ಪಂದಿಸುವುದು ಕಡಿಮೆ ಆಗಿದೆ. ಸ್ವಾರ್ಥ ಹೆಚ್ಚಾಗಿದೆ. ಎಲ್ಲಿಯವರೆಗೂ ಸ್ವಾರ್ಥ ಕಡಿಮೆ ಆಗುವುದಿಲ್ಲವೋ, ಅಲ್ಲಿಯವರೆಗೂ ರಾಜ್ಯದ ಜನತೆಗೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮವಾದ ವಿಷಯಗಳ ಚರ್ಚೆ ಮಾಡುವುದನ್ನು ಬಿಟ್ಟು, ಹನಿಟ್ರ‍್ಯಾಪ್ ಸೇರಿ ವಿವಿಧ ವಿಷಯ ಚರ್ಚೆ ಮಾಡುತ್ತಾರೆ. ಎಲ್ಲ ಪಕ್ಷದ, ವಿರೋಧ ಪಕ್ಷದ ನಾಯಕರು, ಸಭಾ ನಾಯಕರು, ಮುಖ್ಯಸಚೇತಕರನ್ನು ಕರೆದು, ವಿಷಯ ಬಿಟ್ಟು ಬೇರೆ ಮಾತನಾಡಿದರೆ ಸದನದಿಂದ ನಿರ್ದಾಕ್ಷಿಣ್ಯವಾಗಿ ಹೊರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇನೆ. ಕಳೆದ ಅಧಿವೇಶನ ಚೆನ್ನಾಗಿ ನಡೆಸಿದ್ದು, ಈ ಬಾರಿ ಸದನದಲ್ಲಿ 23 ಜನ ಬಜೆಟ್ ಮತ್ತು 23 ಜನ ಮಸೂದೆ ಮೇಲೆ ಮಾತನಾಡಿದರು.

ಶಾಸಕರಿಗೆ ಎಷ್ಟೇ ತರಬೇತಿ ನೀಡಿದರೂ ನಾಯಿಯ ಬಾಲ ಡೊಂಕೆ. ಈಗಾಗಲೇ ಎರಡು ದಿನ ತರಬೇತಿ ನೀಡಿದ್ದೇನೆ. ಇಡೀ ಭಾರತದಲ್ಲಿ ಕರ್ನಾಟಕದ್ದು ಶ್ರೇಷ್ಠವಾದ ವಿಧಾನ ಪರಿಷತ್ತು. ಅದರ ಘನತೆ, ಗೌರವ ಹೆಚ್ಚಿಸಲು ಪ್ರಯತ್ನ ಮಾಡುತ್ತೇವೆ ಎಂದರು.