ಕೊಪ್ಪಳ: ಬ್ರಹ್ಮಣಿ ಸ್ಟೀಲ್ಸ್‌ನ 14 ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದು. ಇದನ್ನು ಲೀಜ್ ಪಡೆದಿಲ್ಲ. ತಪ್ಪು ಮಾಹಿತಿಯಿಂದ ಆಂಧ್ರಪ್ರದೇಶದಲ್ಲಿ ಸುದ್ದಿ ಹರಡಿದೆ. ಜಮೀನು ವಾಪಸ್ ಪಡೆಯಲು ಬರುವುದಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಆನೆಗೊಂದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬ್ರಹ್ಮಣಿ ಸ್ಟೀಲ್ ಕಂಪನಿಯ ಜಮೀನು ಸರ್ಕಾರ ವಶಪಡಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 14 ಸಾವಿರ ಎಕರೆ ಜಮೀನು ಖರೀದಿ ಮಾಡಿದ್ದೇವೆ. ನಾವು ಲೀಜ್ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಯಾವುದೋ ಒಂದು ಉದ್ದೇಶಕ್ಕೆ ಲೀಜ್ ತೆಗೆದುಕೊಂಡರೆ, ಆ ಉದ್ದೇಶ ಪೂರೈಸಲಿಲ್ಲವಾದರೆ, ಆ ಜಮೀನನ್ನು ವಾಪಸ್ ತೆಗೆದುಕೊಳ್ಳಲು ಅವಕಾಶವಿದೆ. ಇದು ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಸರ್ಕಾರಕ್ಕೆ ಜಮೀನು ವಾಪಾಸ್ ಪಡೆಯಲು ಅಧಿಕಾರವಿಲ್ಲ. ಇದು ಬರುವುದೂ ಇಲ್ಲ. ಆದರೆ ಸರ್ಕಾರ ತಪ್ಪು ಮಾಹಿತಿ ನೀಡಿದೆ ಎಂದರು.






















