ಅಸ್ಸಾಂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಎನ್‌ಡಿಎಗೆ ಬಹುಮತ ಸಿಗಲಿದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ತಿಳಿಸಿವೆ. 126 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸರ್ಕಾರ ರೂಪಿಸಲು ಪಕ್ಷವು 64 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿದೆ.
ಬಹುತೇಕ ಎಕ್ಸಿಟ್ ಪೋಲ್ ವರದಿಗಳ ಪ್ರಕಾರ ಎನ್‌ಡಿಎ ಬಹುಮತ ಸಾಧಿಸಲಿದೆ ಎಂದು ಹೇಳಿದ್ದು, ಪ್ರಮುಖ ಚುನಾವಣೋತ್ತರ ಸಮೀಕ್ಷಾ ವರದಿಗಳ ವಿವರ ಇಲ್ಲಿದೆ.
Axis My India: ಎನ್‌ಡಿಎ 88–100, ಐಎನ್‌ಸಿ+ 24–36
Matrize: ಎನ್‌ಡಿಎ 85–95, ಐಎನ್‌ಸಿ+ 25–32
People’s Pulse: ಎನ್‌ಡಿಎ 68–72, ಐಎನ್‌ಸಿ+ 22–26, ಐಎಐಯುಡಿಎಫ್ 3–5
P-MARQ: ಎನ್‌ಡಿಎ 82–94, ಐಎನ್‌ಸಿ+ 30–40
Poll Diary: ಎನ್‌ಡಿಎ 86–101, ಐಎನ್‌ಸಿ+ 15–26
JVC: ಎನ್‌ಡಿಎ 88–101, ಐಎನ್‌ಸಿ+ 23–33
Kamakhya Analytics: ಎನ್‌ಡಿಎ 85–95, ಐಎನ್‌ಸಿ+ 26–39
ಈ ಎಕ್ಸಿಟ್ ಪೋಲ್‌ಗಳ ಪ್ರಕಾರ, ಎನ್‌ಡಿಎ ಬಹುಮತ ಪಡೆಯುವ ಸಾಧ್ಯತೆ ಪ್ರಬಲವಾಗಿದೆ, ಆದರೆ ಐಎನ್‌ಸಿ+ ಮತ್ತು ಇತರ ಮೈತ್ರಿ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ಮುಂದುವರೆಸುವಂತೆ ಕಾಣುತ್ತಿದೆ.




















