ನಿವೇಶನದ ಮೇಲೆ16 ಲಕ್ಷ ರೂ. ಸಾಲ ಪಡೆದ ಆರೋಪ; ದಾಂಡೇಲಿ ಪೊಲೀಸರಿಂದ ದಾಖಲೆಗಳ ಪರಿಶೀಲನೆ, ತನಿಖೆ ಚುರುಕು
ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ: ನಗರಸಭೆಗೆ ಸೇರಿದ ಸರ್ಕಾರಿ ಸ್ವಾಮ್ಯದ ಬೆಲೆಬಾಳುವ ನಿವೇಶನವೊಂದನ್ನು ಆಶ್ರಯ ಯೋಜನೆಯಡಿ ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ನಿವೇಶನದ ಆಧಾರದಲ್ಲಿ ಸುಮಾರು 16 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ ಹಾಗೂ ಅವರ ಪತ್ನಿ ಜಲಜಾಕ್ಷಿ ನಿರೀಕ್ಷಣಾ ಜಾಮೀನು ಕೋರಿ ಶಿರಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 28ರಂದು ವೆಂಕಟೇಶ್ವರ ಬಿ. ಸುಬ್ಬಯ್ಯ ಎಂಬುವವರು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. (FIR 154/2026) ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 420, 461, 468, 471 ಹಾಗೂ 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸರ್ಕಾರಕ್ಕೆ ಸೇರಿದ ನಿವೇಶನವನ್ನು ಆಶ್ರಯ ಯೋಜನೆಯ ಹೆಸರಿನಲ್ಲಿ ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಬಳಿಕ ಈ ದಾಖಲೆಗಳನ್ನು ಬಳಸಿಕೊಂಡು ಸುಮಾರು 16 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಲಾಗಿದೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿದೆ.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ದಾಂಡೇಲಿ ಪೊಲೀಸರು ಹಳಿಯಾಳ ಉಪನೋಂದಣಾಧಿಕಾರಿಗಳ ಕಚೇರಿ ಸೇರಿದಂತೆ ಸಂಬಂಧಿತ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ, ಪಂಚನಾಮೆ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ದಾಖಲೆಗಳ ನೈಜತೆ ಹಾಗೂ ಅವುಗಳ ಆಧಾರದ ಮೇಲೆ ನಡೆದಿರುವ ಆಸ್ತಿ ವ್ಯವಹಾರಗಳ ಕುರಿತು ತನಿಖೆ ಮುಂದುವರಿದಿದೆ.
ಆರೋಪಿಗಳ ನಡೆಗೆ ದೂರುದಾರರ ಆಕ್ಷೇಪ : ಇನ್ನೊಂದೆಡೆ, ತಮ್ಮ ವಿರುದ್ಧ ಕೇವಲ ದೂರು ದಾಖಲಾಗಿದೆ ಎಂಬ ಕಾರಣಕ್ಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲವೆಂಬಂತೆ ಆರೋಪಿತರು ಪೊಲೀಸರ ನಡುವೆ ಓಡಾಡಿಕೊಂಡು, ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾ, ಸಭೆ-ಸಮಾರಂಭಗಳನ್ನು ಭಾಗವಹಿಸುತ್ತಿರುವದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದು ತನಿಖೆಯ ದೃಷ್ಠಿಯಿಂದ ಸರಿಯಲ್ಲವೆಂದು, ಪೋಲಿಸ್ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸಿ ರಾಜ್ಯ ಪೋಲಿಸ್ ಮಹಾನಿರ್ದೇಶಕರಿಗೆ, ಪಶ್ಚಿಮ ವಲಯ ಡಿಐಜಿ ಮತ್ತು ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದಾಂಡೇಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ ದೂರು ನೀಡಿದ್ದಾರೆ. ದೂರುದಾರ ಅಗತ್ಯಬಿದ್ದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸುವದಾಗಿ ತಿಳಿಸಿದ್ದಾರೆ.
- ಸರ್ಕಾರಿ ನಿವೇಶನ ಖಾಸಗಿ ಆಸ್ತಿಯಾಗಿ ಪರಿವರ್ತನೆ ಆರೋಪ: ಸಾಹಿತ್ಯ ಪರಿಷತ್ ಅಧ್ಯಕ್ಷ ದಂಪತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ!
- ಕೋಟಿ ಕೋಟಿ ಜನರಿಗೆ ಕಾಯಿಲೆಯಿದ್ದರೂ ಮಧುಮೇಹದ ಅರಿವೇ ಇಲ್ಲ: ಆರಂಭಿಕ ತಪಾಸಣೆಯೇ ಮದ್ದು
- ಅಮೆರಿಕ ವಾಯುಯಾನ ಸ್ತಬ್ಧ: ಸೈಬರ್ ದಾಳಿಯಲ್ಲ, ಟೆಕ್ ಎಡವಟ್ಟು – ವಿಮಾನ ನಿರ್ಬಂಧ ವಾಪಸ್!
- ಮೋದಿ ನನ್ನೊಂದಿಗೆ ಚರ್ಚೆಗೆ ಬರಲ್ಲ; ಬಂದರೆ ಅವರ ರಾಜಕೀಯ ಜೀವನ ಅಂತ್ಯ
- ಮಿನಿಬಸ್-ಟ್ರಕ್ ಮುಖಾಮುಖಿ ಡಿಕ್ಕಿ: ಸಾವಿನ ಸಂಖ್ಯೆ 26ಕ್ಕೆ ಏರಿಕೆ, ಮೃತರಲ್ಲಿ ಕಾಲೇಜು ವಿದ್ಯಾರ್ಥಿಗಳೂ ಭಾಗಿ!






















