SK Home Ad
Home ಸುದ್ದಿ Samyukta Karnataka News Live: ವಾರಾಣಸಿಯಲ್ಲಿ ಸಿದ್ಧವಾಗುತ್ತಿದೆ ಶಿವನ ರೂಪದ ಕ್ರಿಕೆಟ್ ಕ್ರೀಡಾಂಗಣ

Samyukta Karnataka News Live: ವಾರಾಣಸಿಯಲ್ಲಿ ಸಿದ್ಧವಾಗುತ್ತಿದೆ ಶಿವನ ರೂಪದ ಕ್ರಿಕೆಟ್ ಕ್ರೀಡಾಂಗಣ

0
105
ವಾರಣಾಸಿಯ ಹೊಸ ಕ್ರಿಕೆಟ್ ತಾಣ ಅಂತಿಮ ಹಂತದಲ್ಲಿ : ಡಮರು ಮಾದರಿ ಮೀಡಿಯಾ ಸೆಂಟರ್, ಘಾಟ್‌ಗಳಂತಿರುವ ಗ್ಯಾಲರಿ

ಮೋದಿ ಭೇಟಿಯ ಬಳಿಕ 15 ವರ್ಷಗಳ ಭೂ ವಿವಾದಕ್ಕೆ ತಿರುವು : ಪ್ರಧಾನಿ ನರೇಂದ್ರ ಮೋದಿ ಅವರ ಶಾಲಾ ದಿನಗಳ ಸಹಪಾಠಿಯಾಗಿದ್ದ 81 ವರ್ಷದ ಅಸ್ಗರ್ ಅಲಿ ವೋರಾ ಅವರ ಸುಮಾರು 15 ವರ್ಷಗಳ ಭೂ ವಿವಾದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ತಮ್ಮ ಜಮೀನಿನ ವಿವಾದವನ್ನು ಪ್ರಸ್ತಾಪಿಸಿದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಇದೀಗ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ವಿವಾದಿತ ಜಾಗದ ಮೇಲಿನ ವಶವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದಾಳಿಂಬೆ ಬುಟ್ಟಿಯೊಂದಿಗೆ ಬಂದ ರೈತನ ಕೃತಜ್ಞತೆಯನ್ನು ಹಂಚಿಕೊಂಡ ಸಚಿವರು : ಬರ, ನೀರಿನ ಕೊರತೆ, ಸಾಲದ ಹೊರೆ ಮತ್ತು ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗಿದ್ದ ರೈತ ಕುಟುಂಬವೊಂದು ನೀರಾವರಿ ಸೌಲಭ್ಯ ಹಾಗೂ ಸತತ ಪರಿಶ್ರಮದ ಮೂಲಕ ಕೃಷಿಯಲ್ಲಿ ಹೊಸ ಬದುಕು ಕಟ್ಟಿಕೊಂಡಿರುವ ಘಟನೆ ಗಮನ ಸೆಳೆದಿದೆ. ಮುಳವಾಡದ ಪಾಂಡು ಜಾಧವ್ ಹಾಗೂ ಅವರ ಕುಟುಂಬದ ಈ ಪಯಣವನ್ನು ಸಚಿವ ಎಂ.ಬಿ. ಪಾಟೀಲ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಣಾಸಿಯ ಗಂಜಾರಿ ಕ್ರೀಡಾಂಗಣಕ್ಕೆ ಹೊಸ ರೂಪ : ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಿರ್ಮಾಣವಾಗುತ್ತಿರುವ ಗಂಜಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇದೀಗ ಕಾಮಗಾರಿಯ ಅಂತಿಮ ಹಂತಕ್ಕೆ ತಲುಪಿದೆ. ಇತ್ತೀಚಿನ ವರದಿಗಳ ಪ್ರಕಾರ, ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಶೇ.92ರಷ್ಟು ಪೂರ್ಣಗೊಂಡಿದ್ದು, 2027ರ ವೇಳೆಗೆ ಪ್ರಮುಖ ಕ್ರಿಕೆಟ್ ಪಂದ್ಯಗಳಿಗೆ ವೇದಿಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ. ಕೇವಲ ಕ್ರಿಕೆಟ್ ಪಂದ್ಯಗಳಿಗಾಗಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣ ಎನ್ನುವುದಕ್ಕಿಂತಲೂ, ಕಾಶಿ ನಗರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇದರ ವಿನ್ಯಾಸ ರೂಪಿಸಲಾಗಿದೆ. ಶಿವನಿಗೆ ಸಂಬಂಧಿಸಿದ ವಿನ್ಯಾಸದ ಅಂಶಗಳು ಕ್ರೀಡಾಂಗಣದ ಪ್ರಮುಖ ಆಕರ್ಷಣೆಯಾಗಿವೆ. ಮಾಧ್ಯಮ ಕೇಂದ್ರವನ್ನು ಡಮರು ಆಕಾರದಲ್ಲಿ, ಪ್ರೇಕ್ಷಕರ ಆಸನ ವ್ಯವಸ್ಥೆಯನ್ನು ವಾರಣಾಸಿಯ ಘಾಟ್‌ಗಳ ಮೆಟ್ಟಿಲುಗಳನ್ನು ನೆನಪಿಸುವ ರೀತಿಯಲ್ಲಿ ರೂಪಿಸಲಾಗಿದೆ. ತ್ರಿಶೂಲದ ಆಕಾರದ ಫ್ಲಡ್‌ಲೈಟ್‌ಗಳು ಮತ್ತು ಇತರ ವಿನ್ಯಾಸ ಅಂಶಗಳೂ ಯೋಜನೆಯ ವಿಶೇಷತೆಯಾಗಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

UPI ಪಾವತಿಗಳಲ್ಲಿ ಮಹತ್ವದ ಬದಲಾವಣೆ – ಹೊಸ MDR ನಿಯಮವೇನು? : ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ (UPI) ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಚರ್ಚೆಯ ನಡುವೆಯೇ ಕೇಂದ್ರ ಸರ್ಕಾರ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟನೆ ನೀಡಿವೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ UPI ಹಣ ವರ್ಗಾವಣೆಗಳು ಮೊತ್ತ ಎಷ್ಟೇ ಇದ್ದರೂ ಉಚಿತವಾಗಿಯೇ ಮುಂದುವರಿಯಲಿವೆ. ಗ್ರಾಹಕರು UPI ಮೂಲಕ ಪಾವತಿ ಮಾಡುವಾಗ ಯಾವುದೇ ನೇರ ವಹಿವಾಟು ಶುಲ್ಕ ಪಾವತಿಸಬೇಕಾಗಿಲ್ಲ. ಇತ್ತೀಚಿನ ಬೆಳವಣಿಗೆಯಂತೆ, 2026ರ ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ ಕೆಲವು ವ್ಯಕ್ತಿಯಿಂದ ವ್ಯಾಪಾರಿಗೆ (P2M) UPI ಪಾವತಿಗಳಿಗೆ Merchant Discount Rate (MDR) ಅನ್ವಯವಾಗಲಿದೆ. ಸಾಮಾನ್ಯ ಅರ್ಹ P2M ವಹಿವಾಟುಗಳಿಗೆ MDR ಶೇ.0.4ರಷ್ಟಿದ್ದು, ₹75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ ಗರಿಷ್ಠ ₹300 ಮಿತಿಯನ್ನು ನಿಗದಿಪಡಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತುಳುವಿಗೆ 2ನೇ ಅಧಿಕೃತ ಭಾಷೆ ಸ್ಥಾನಮಾನ – ಸರ್ಕಾರದ ಗಂಭೀರ ಚಿಂತನೆ: ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ಭಾಷೆ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ತುಳು ಭಾಷೆಯ ಗೌರವ, ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಾನೂನು ಮತ್ತು ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಂಜಿನಿಯರ್‌ಗಳ ವೃತ್ತಿಪರ ಗುರುತಿಗೆ ಹೊಸ ಮಾನ್ಯತೆ – ಹೆಸರಿನ ಮುಂದೆ ‘Er.’ ಬಳಸಲು ಕರ್ನಾಟಕ ಸರ್ಕಾರ ಗ್ರೀನ್‌ ಸಿಗ್ನಲ್‌ : ಭಾರತ ರತ್ನ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 165ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಎಂಜಿನಿಯರ್‌ಗಳಿಗೆ ವಿಶೇಷ ಗೌರವ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಂಜಿನಿಯರ್‌ಗಳು ತಮ್ಮ ಹೆಸರಿನ ಮುಂದೆ ‘Er.’ (Engineer) ಎಂಬ ಪೂರ್ವಪ್ರತ್ಯಯವನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

(ಮಾಹಿತಿ ಅಪ್​ಡೇಟ್ ಆಗಲಿದೆ)

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.