ಧಾರವಾಡ: ಇಸ್ಲಾಂ ಶ್ರೇಷ್ಠ ಧರ್ಮ, ಹಜ್ ಯಾತ್ರೆಗೆ ಹೋಗಲು ಬಯಸುವುದಾಗಿ ಹೇಳಿಕೆ ನೀಡಿದ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಗೆ ನೀಡಲು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ದೇಣಿಗೆ ಎತ್ತಿ 1,060 ರೂ. ಸಂಗ್ರಹಿಸಿದರು.
ಮಠ, ಮಂದಿರಗಳಿಗೆ ಹೋಗುವುದಿಲ್ಲ ಎಂದು ಸಚಿವ ರಾಯರೆಡ್ಡಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ನಗರದ ಮಾರುಕಟ್ಟೆಯಲ್ಲಿ ದೇಣಿಗೆ ಸಂಗ್ರಹಿಸುವ ಮೂಲಕ ಪ್ರತಿಭಟಿಸಲಾಯಿತು.
ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಂದ ಯುವ ಮೋರ್ಚಾ ಕಾರ್ಯಕರ್ತರು ದೇಣಿಗೆ ಸಂಗ್ರಹಿಸಿದರು. ಒಟ್ಟು 1060 ರೂ. ಸಂಗ್ರಹಗೊಂಡಿತು. ಸಂಗ್ರಹಗೊಂಡ ದೇಣಿಗೆಯನ್ನು ಸಚಿವರಿಗೆ ಕಳಿಸಲು ವ್ಯವಸ್ಥೆ ಮಾಡಲಾಯಿತು.





















