ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ಕ್ಯಾಸಲ್ ರಾಕ್ – ಮೀರಜ್ – ಕ್ಯಾಸಲ್ ರಾಕ್ ಕಾಯ್ದಿರಿಸದ ಎಕ್ಸ್‌ಪ್ರೆಸ್ ಜೋಡಿ ರೈಲಿಗೆ (17334/17333) ಬಾಗೇವಾಡಿ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ತಾತ್ಕಾಲಿಕ ನಿಲುಗಡೆ ಒದಗಿಸಿದೆ.
ಕ್ಯಾಸಲ್ ರಾಕ್ – ಮೀರಜ್ ಎಕ್ಸ್‌ಪ್ರೆಸ್ (17334) ಬಾಗೇವಾಡಿ ನಿಲ್ದಾಣಕ್ಕೆ ರಾತ್ರಿ 10:04ಕ್ಕೆ ಆಗಮಿಸಿ 10:05ಕ್ಕೆ ನಿರ್ಗಮಿಸಲಿದೆ. ಮೀರಜ್ – ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ (17333) ಮಧ್ಯಾಹ್ನ 01:18ಕ್ಕೆ ಆಗಮಿಸಿ 01:19ಕ್ಕೆ ನಿರ್ಗಮಿಸಲಿದೆ.
ಈ ತಾತ್ಕಾಲಿಕ ನಿಲುಗಡೆಯು ಸೆಪ್ಟೆಂಬರ್ 1, 2026ರಿಂದ ಫೆಬ್ರವರಿ 28, 2027ರವರೆಗೆ ಆರು ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಹುಬ್ಬಳ್ಳಿ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
- UPI ಬಳಕೆದಾರರಿಗೆ ಸದ್ಯಕ್ಕೆ ನಿರಾಳ: MDR ಶುಲ್ಕ ಜಾರಿ ದೀಪಾವಳಿ ಬಳಿಕಕ್ಕೆ ಮುಂದೂಡಿಕೆ
- ನಾಲ್ವರು ನಿರ್ದೇಶಕರು, ನಾಲ್ವರು ನಟಿಯರು: ‘ನಾಕು ತಂತಿ’ ಟೀಸರ್ ಬಿಡುಗಡೆ
- ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಮೊದಲ ಟ್ರೋಫಿ ಗರಿ
- ಅಂಧ ಓದುಗರಿಗೆ ಸಿಹಿಸುದ್ದಿ: ಪಾಕ್ಷಿಕದಿಂದ ವಾರಪತ್ರಿಕೆಯಾದ ‘ದೃಷ್ಟಿ’
- ಮದಕರಿ ನಾಯಕ ಜಯಂತಿಯಲ್ಲಿ ಕಿಚ್ಚ ಸುದೀಪ್ ಹವಾ: ಚಿತ್ರದುರ್ಗದಲ್ಲಿ ಅಭಿಮಾನಿಗಳ ಸಂಭ್ರಮ





















