SK Home Ad
Home ಸಿನಿ ಮಿಲ್ಸ್ ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ಹಿಂದಿ ಟ್ರೇಲರ್ ಬಿಡುಗಡೆ

ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ಹಿಂದಿ ಟ್ರೇಲರ್ ಬಿಡುಗಡೆ

0
65

ಮುಂಬೈ: ಭಾರತೀಯ ಮತ್ತು ಈಜಿಪ್ಟಿನ ಸೂಪರ್‌ಸ್ಟಾರ್‌ಗಳ ಸಂಗಮದ ಅಂತರರಾಷ್ಟ್ರೀಯ ಆ್ಯಕ್ಷನ್ ಚಿತ್ರ ‘7 ಡಾಗ್ಸ್’ನ ಹಿಂದಿ ಟ್ರೇಲರ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಆಗಸ್ಟ್ 21, 2026ರಂದು ಭಾರತದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈಜಿಪ್ಟಿನ ತಾರೆಯರಾದ ಅಹ್ಮದ್ ಎಝ್ ಮತ್ತು ಕರೀಮ್ ಅಬ್ದೆಲ್ ಅಜೀಜ್ ಅವರೊಂದಿಗೆ ಭಾರತೀಯ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಜತೆಗೆ ಅಂತರರಾಷ್ಟ್ರೀಯ ಖ್ಯಾತಿಯ ನಟಿಯರಾದ ಮೋನಿಕಾ ಬೆಲ್ಲುಸಿ ಮತ್ತು ಜಿಯಾನ್ಕಾರ್ಲೊ ಎಸ್ಪೊಸಿಟೊ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಜನರಲ್ ಎಂಟರ್‌ಟೈನ್‌ಮೆಂಟ್ ಅಥಾರಿಟಿ (GEA) ಮತ್ತು ರಿಯಾದ್ ಸೀಸನ್ ಬೆಂಬಲದೊಂದಿಗೆ ಸೆಲಾ ಸ್ಟುಡಿಯೋಸ್ ನಿರ್ಮಿಸಿರುವ ‘7 ಡಾಗ್ಸ್’ ಚಿತ್ರವನ್ನು ಆದಿಲ್ ಎಲ್ ಅರ್ಬಿ ಮತ್ತು ಬಿಲಾಲ್ ಫಲ್ಲಾ ನಿರ್ದೇಶಿಸಿದ್ದಾರೆ. ಇವರಿಬ್ಬರು ‘ಬ್ಯಾಡ್ ಬಾಯ್ಸ್ ಫಾರ್ ಲೈಫ್’ ಮತ್ತು ‘ಬ್ಯಾಡ್ ಬಾಯ್ಸ್: ರೈಡ್ ಆರ್ ಡೈ’ ಸಿನಿಮಾಗಳ ನಿರ್ದೇಶಕರಾಗಿದ್ದಾರೆ.

ಟ್ರೇಲರ್‌ನಲ್ಲಿ ಹೈ-ಆಕ್ಟೇನ್ ಆ್ಯಕ್ಷನ್, ಅಂತರರಾಷ್ಟ್ರೀಯ ಮಟ್ಟದ ತಾರಾಬಳಗ ಹಾಗೂ ಭರ್ಜರಿ ದೃಶ್ಯ ವೈಭವ ಗಮನ ಸೆಳೆಯುತ್ತಿದ್ದು, ಭಾರತದಲ್ಲಿ ಚಿತ್ರದ ಬಿಡುಗಡೆಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.