ಕಲಬುರಗಿಯಲ್ಲಿ ಪಾಕ್ ಸಂಪರ್ಕದ ಆರೋಪ; ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ – ಮಾಲಗತ್ತಿ ಬಳಿ ವಾಸವಿದ್ದ ವ್ಯಕ್ತಿಯ ಕೊಠಡಿಯಲ್ಲಿ ಮ್ಯಾಪ್ ಪತ್ತೆ
ಸಂ.ಕ.ಸಮಾಚಾರ ಕಲಬುರಗಿ : ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾದ ಇಬ್ಬರನ್ನು ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಲಭಿಸಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳ ಪೈಕಿ ಉತ್ತರ ಪ್ರದೇಶದ ವಿಳಾಸ ಹೊಂದಿರುವ ಸಮೀರ್ ಸಲ್ಮಾನ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ವಾಟ್ಸ್‌ಆ್ಯಪ್ ಕರೆ ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಇಬ್ಬರ ಮೇಲಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.
ನಗರದ ಹೊರವಲಯದ ಮಾಲಗತ್ತಿ ಸಮೀಪ ಸಮೀರ್ ವಾಸವಿದ್ದ ಕೊಠಡಿಯಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾಪ್‌ಗಳ ಸ್ವರೂಪ, ಅವುಗಳ ಉದ್ದೇಶ ಹಾಗೂ ಆರೋಪಿಗಳಿಗೆ ಪಾಕಿಸ್ತಾನದೊಂದಿಗೆ ಇದ್ದ ಸಂಪರ್ಕದ ಬಗ್ಗೆ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಗಳ ನಿಜಾಸತ್ಯ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
- 13 ವರ್ಷ ಹಿಂದಿನ ರೈಲು ತಡೆ ಪ್ರಕರಣ: ಕೋಡಿಹಳ್ಳಿ ಚಂದ್ರಶೇಖರ್ ಬಂಧನ
- ಮೈಸೂರು ದಸರಾ 2026 ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ
- ಹಿಂದೂ–ಮುಸ್ಲಿಂ ಸೌಹಾರ್ದತೆಗೆ ಮಾದರಿಯಾದ ಹೂವಿನಹಡಗಲಿ: ಗಣಪತಿಗೆ ಮುಸ್ಲಿಂ ಬಾಂಧವರಿಂದ ಪೂಜೆ
- ನೈಸ್ ತಂದಿದ್ದೇ ದೇವೇಗೌಡ್ರು, ಸುಳ್ಳು ಅವರ ಮನೆ ದೇವರು: ಹೆಚ್ಡಿಕೆಗೆ ಡಿಕೆಶಿ ತಿರುಗೇಟು
- AI ಜತೆ ಸಚಿನ್ ಹೊಸ ಅಧ್ಯಾಯ: ChatGPT ಜತೆ ಕೈಜೋಡಿಸಿದ ಮಾಸ್ಟರ್ ಬ್ಲಾಸ್ಟರ್!






















