ಬೆಂಗಳೂರು: ದೇಶಾದ್ಯಂತ ಅಪಾರ ಕುತೂಹಲ ಕೆರಳಿಸಿರುವ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ’ ಚಿತ್ರದ ಅಧಿಕೃತ ಟ್ರೇಲರ್ ಇಂದು ಶನಿವಾರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಟ್ರೇಲರ್‌ನಲ್ಲಿ ಯಶ್ ಅವರು ಹಿಂಸೆ, ಅಧಿಕಾರ ಹಾಗೂ ಪ್ರೀತಿಯ ಸಂಕೀರ್ಣ ಜಗತ್ತಿನಲ್ಲಿ ‘ರಾಯ’ ಮತ್ತು ‘ಟಿಕೆಟ್’ ಎಂಬ ದ್ವಿಪಾತ್ರಗಳಲ್ಲಿ ಮಾಸ್ ಹಾಗೂ ರಗಡ್ ಅವತಾರದಲ್ಲಿ ಮಿಂಚಿದ್ದಾರೆ.
“ಹಿರಿಯರಿಗಾಗಿ ಹೆಣೆದ ಕಾಲ್ಪನಿಕ ಕಥೆ” ಎಂಬ ಅಡಿಬರಹ ಹೊಂದಿರುವ ಈ ಚಿತ್ರವು, ಕೇವಲ ಸಾಹಸ ಪ್ರಧಾನ ಚಿತ್ರವಾಗಿರದೆ ಸಂಕೀರ್ಣ ಮಾನವ ಸಂಬಂಧಗಳ ಕಥಾಹಂದರವನ್ನು ಹೊಂದಿದೆ. ಪ್ರೀತಿ, ದ್ರೋಹ, ಸೇಡು ಮತ್ತು ಮಾಫಿಯಾ ಜಗತ್ತಿನ ಕರಾಳ ಮುಖಗಳನ್ನು ಟ್ರೇಲರ್ನಲ್ಲಿ ಅತ್ಯಂತ ತೀವ್ರವಾಗಿ ತೋರಿಸಲಾಗಿದೆ.






















