SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಮದುವೆ ಮಾತು: ತಾಯಿಯ ಪತ್ರದಲ್ಲೇ ಇದೆ ಅಸಲಿ ರಹಸ್ಯ!

ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಮದುವೆ ಮಾತು: ತಾಯಿಯ ಪತ್ರದಲ್ಲೇ ಇದೆ ಅಸಲಿ ರಹಸ್ಯ!

0
16

BBK13: ‘ಬಿಗ್‌ ಬಾಸ್‌ ಕನ್ನಡ’ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಹೊಸ ರೋಚಕ ಬೆಳವಣಿಗೆಗಳು ನಡೆಯುತ್ತಿವೆ. ಮನೆಯಲ್ಲಿ ಸ್ಪರ್ಧಿಗಳ ಆಟ, ತಮಾಷೆ ಹಾಗೂ ಭಾವನಾತ್ಮಕ ಕ್ಷಣಗಳು ವೀಕ್ಷಕರನ್ನು ರಂಜಿಸುತ್ತಿರುವ ಬೆನ್ನಲ್ಲೇ, ಸ್ಪರ್ಧಿ ಸೌಂದರ್ಯಾ ಶೆಟ್ಟಿ ಅವರ ಮದುವೆ ವಿಚಾರ ಸದ್ಯ ಮನೆಯಲ್ಲಿ ಹಾಗೂ ಹೊರಗಡೆ ಸಖತ್ ಚರ್ಚೆಗೆ ಗ್ರಾಸವಾಗಿದೆ. ಶೀಘ್ರದಲ್ಲೇ ಸೌಂದರ್ಯಾ ಹಸಮಣೆ ಏರಲಿದ್ದಾರೆ ಎಂಬ ಸುಳಿವು ಅವರ ಕುಟುಂಬದಿಂದ ಸಿಕ್ಕಿದೆ.

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ‘ಸ್ವಯಂವರ’ ಟಾಸ್ಕ್ ಆಯೋಜಿಸಲಾಗಿತ್ತು. ಈ ಮೋಜಿನ ಆಟದಲ್ಲಿ ವಧುವಿನ ಗೆಟಪ್‌ನಲ್ಲಿ ಮಿಂಚಿದ ಸೌಂದರ್ಯಾ ಶೆಟ್ಟಿ ಎಲ್ಲರ ಗಮನ ಸೆಳೆದಿದ್ದರು. ಮನೆಯ ಇAತಹ ಮೋಜಿನ ವಾತಾವರಣದ ನಡುವೆ, ಸೌಂದರ್ಯಾ ಅವರ ತಾಯಿ ಗೀತಾ ಅವರು ಮಗಳಿಗೆ ವಿಶೇಷ ಪತ್ರವೊಂದನ್ನು ಕಳುಹಿಸಿದ್ದಾರೆ. ತಾಯಿಯ ಪತ್ರವನ್ನು ಪಡೆದ ಸೌಂದರ್ಯಾ ಕ್ಷಣಕಾಲ ಭಾವುಕರಾದರೂ, ಅದರಲ್ಲಿರುವ ಪ್ರೀತಿಯ ಸಾಲುಗಳನ್ನು ಓದಿ ಖುಷಿಪಟ್ಟಿದ್ದಾರೆ.

ತಾಯಿ ಗೀತಾ ಬರೆದ ಆ ಪತ್ರದಲ್ಲಿ, “ಬಿಗ್ ಬಾಸ್ ಮನೆಯಲ್ಲಿ ನಡೆದ ಸ್ವಯಂವರ ಟಾಸ್ಕ್ ತುಂಬಾ ಚೆನ್ನಾಗಿತ್ತು. ನೀನು ಮನೆಯಿಂದ ಹೊರಗೆ ಬಂದಮೇಲೆ ನಿನಗೂ ನಿಜವಾದ ಸ್ವಯಂವರ ಮಾಡುತ್ತೇವೆ” ಎಂದು ತಮಾಷೆಯಾಗಿ ಉಲ್ಲೇಖಿಸಿದ್ದಾರೆ. ತಾಯಿಯ ಈ ಮುದ್ದಾದ ಮಾತನ್ನು ಮನೆಯ ಎಲ್ಲಾ ಸದಸ್ಯರ ಮುಂದೆ ಓದುತ್ತಾ ಸೌಂದರ್ಯಾ ಕರಗಿದ್ದಾರೆ. ಈ ಪತ್ರದ ಮೂಲಕ ಸೌಂದರ್ಯಾ ಶೆಟ್ಟಿ ಮದುವೆಗೆ ಮನೆಯಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ ಎಂಬುದು ಸ್ಪಷ್ಟವಾಗಿದ್ದು, ಬಿಗ್ ಬಾಸ್ ಪಯಣ ಮುಗಿದ ಬಳಿಕ ನಟಿ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.