SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ನಲ್ಲಿ ಕ್ಯಾಪ್ಟೆನ್ಸಿ ರಂಪಾಟ: ಗಗನ್ ಹಾಗೂ ಆಸಿಯಾ ನಡುವೆ ಭಾರಿ ವಾಗ್ವಾದ!

ಬಿಗ್‌ ಬಾಸ್‌ನಲ್ಲಿ ಕ್ಯಾಪ್ಟೆನ್ಸಿ ರಂಪಾಟ: ಗಗನ್ ಹಾಗೂ ಆಸಿಯಾ ನಡುವೆ ಭಾರಿ ವಾಗ್ವಾದ!

0
11

BBK13: ‘ಬಿಗ್‌ ಬಾಸ್‌ ಕನ್ನಡ ಸೀಸನ್-13’ ರಿಯಾಲಿಟಿ ಶೋನಲ್ಲಿ ಈ ವಾರದ ಕ್ಯಾಪ್ಟೆನ್ಸಿ ಓಟಕ್ಕೆ ಅರ್ಹರಾಗುವ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ತೀವ್ರ ರಂಪಾಟಕ್ಕೆ ಕಾರಣವಾಗಿದೆ. ಈ ವಾರ ತಮ್ಮ ಕುಟುಂಬದಿಂದ ಬಂದ ಪತ್ರಗಳನ್ನು ಪಡೆದಿದ್ದ 8 ಸದಸ್ಯರಲ್ಲಿ ಕ್ಯಾಪ್ಟನ್ ಆಗಲು ಯೋಗ್ಯತೆಯಿಲ್ಲದ 4 ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಬೇಕೆಂದು ‘ಬಿಗ್ ಬಾಸ್’ ಸೂಚಿಸಿದ್ದರು.

ಆದ್ರೆ ಧನುಷ್ “ನಾನು ಕ್ಯಾಪ್ಟೆನ್ಸಿ ರೇಸ್‌ನಲ್ಲಿ ಆಡಿಯೇ ತೀರುತ್ತೇನೆ” ಎಂದು ಪಟ್ಟು ಹಿಡಿದಿದ್ದರಿಂದ 8 ಸದಸ್ಯರ ನಡುವೆ ಒಮ್ಮತದ ನಿರ್ಧಾರ ಬರಲಿಲ್ಲ. ಇದರಿಂದ ಪ್ರಕ್ರಿಯೆ ರದ್ದಾಗಿ, ಬಿಗ್‌ ಬಾಸ್ ಈ ಮೊದಲು ಪತ್ರ ಪಡೆಯದಿದ್ದ ಸೋನಿಕಾ ಗೌಡ, ತಾಂಡವ್ ರಾಮ್ ಹಾಗೂ ಆಸಿಯಾ ಅವರನ್ನು ಕನ್ಫೆಷನ್ ರೂಮ್‌ಗೆ ಕರೆದರು. ಒಮ್ಮತ ಮೂಡದ ಕಾರಣ 4 ಸ್ಪರ್ಧಿಗಳನ್ನು ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಗಿಡುವ ಅಧಿಕಾರವನ್ನು ಈ ಮೂವರಿಗೆ ನೀಡಲಾಯಿತು.

ಈ ಅವಕಾಶವನ್ನು ಬಳಸಿಕೊಂಡ ಮೂವರು ಸದಸ್ಯರು ಗಗನ್, ಸೌಂದರ್ಯ, ಕಿರಣ್ ಶಾಸ್ತ್ರಿ ಹಾಗೂ ಜಗದೀಶ್ ಅವರನ್ನು ಕ್ಯಾಪ್ಟನ್ ಪಟ್ಟದ ಓಟದಿಂದ ಹೊರಗಿಡುವ ನಿರ್ಧಾರ ಕೈಗೊಂಡರು. ಈ ತೀರ್ಮಾನದ ಬಳಿಕ ಹೊರಬಿದ್ದ ಅಭ್ಯರ್ಥಿಗಳು ತಮ್ಮ ಅಸಮಾಧಾನ ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಜಗಳ ಆರಂಭವಾಯಿತು. ಪ್ರಮುಖವಾಗಿ ಗಗನ್ ಚಿನ್ನಪ್ಪ ಹಾಗೂ ಆಸಿಯಾ ನಡುವೆ ಭಾರಿ ವಾಗ್ವಾದ ಜರುಗಿದ್ದು, ಸ್ಪರ್ಧಿಗಳ ನಡುವೆ ತೀವ್ರ ಮನಸ್ತಾಪ ಸೃಷ್ಟಿಯಾಗಿದೆ.