SK Home Ad
Home ನಮ್ಮ ಜಿಲ್ಲೆ ಕೊಡಗು ಮಡಿಕೇರಿ: ಆಟವಾಡುವ ವೇಳೆ LED ಬಲ್ಬ್ ನುಂಗಿದ 8 ತಿಂಗಳ ಮಗು

ಮಡಿಕೇರಿ: ಆಟವಾಡುವ ವೇಳೆ LED ಬಲ್ಬ್ ನುಂಗಿದ 8 ತಿಂಗಳ ಮಗು

0
76

ಮಡಿಕೇರಿ: ಎಂಟು ತಿಂಗಳ ಕಂದಮ್ಮ ಎಲ್‌ಇಡಿ ಬಲ್ಬ್ ನುಂಗಿದ ಆತಂಕಕಾರಿ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಮಗುವಿನ ಪ್ರಾಣ ಉಳಿದಿದೆ.

ಮನೆಯಲ್ಲಿದ್ದ ವೇಳೆ ಮಗು ಏಕಾಏಕಿ ವಿಪರೀತವಾಗಿ ಅಳಲು ಆರಂಭಿಸಿದೆ. ಮಗುವಿನ ಅಳುವಿನ ಕಾರಣ ತಿಳಿಯದೇ ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಮಡಿಕೇರಿ ನಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಎಕ್ಸ್‌ರೇ ಮಾಡಿಸಿದ್ದಾರೆ. ಈ ವೇಳೆ ಮಗುವಿನ ಗಂಟಲು ಭಾಗದಲ್ಲಿ ಸಣ್ಣ ಲೋಹದ ವಸ್ತುವೊಂದು ಸಿಲುಕಿರುವುದು ಪತ್ತೆಯಾಗಿದೆ. ಆರಂಭದಲ್ಲಿ ಮಗು ಪಿನ್ ಅಥವಾ ಇತರೆ ಲೋಹದ ವಸ್ತುವನ್ನು ನುಂಗಿರಬಹುದೆಂದು ವೈದ್ಯರು ಶಂಕಿಸಿದ್ದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಮಂತ್ರಾಲಯ ಯಾತ್ರೆ ಹೊರಟಿದ್ದ ನಾಲ್ವರು ಸಾವು!

ಆದರೆ ಬಳಿಕ ಲ್ಯಾರಿಂಗೊಸ್ಕೋಪ್ ಪರೀಕ್ಷೆ ನಡೆಸಿದಾಗ, ಮಗುವಿನ ಗಂಟಲಲ್ಲಿ ಎಲ್‌ಇಡಿ ಬಲ್ಬ್ ಸಿಲುಕಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಇಎನ್‌ಟಿ ತಜ್ಞೆ ಡಾ. ರಾಜಶ್ರಿ ಹಾಗೂ ಮಕ್ಕಳ ತಜ್ಞ ಡಾ. ಖುಶ್ವಂತ್ ಅವರ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ನಡೆಸದೇ ಅತ್ಯಂತ ಎಚ್ಚರಿಕೆಯಿಂದ ಬಲ್ಬ್ ಅನ್ನು ಹೊರತೆಗೆದಿದೆ.

ಆಟವಾಡುವ ಸಂದರ್ಭದಲ್ಲೇ ಮಗು ಬಲ್ಬ್ ನುಂಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆ ಹಾಗೂ ಪೋಷಕರ ತಕ್ಷಣದ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.