SK Home Ad
Home ನಮ್ಮ ಜಿಲ್ಲೆ ಕೊಡಗು ದುಬಾರೆ ಆನೆ ಶಿಬಿರ ಪುನರಾರಂಭ

ದುಬಾರೆ ಆನೆ ಶಿಬಿರ ಪುನರಾರಂಭ

0
42

ಮಡಿಕೇರಿ: ಸಾಕಾನೆಗಳ ಸ್ನಾನ ವೀಕ್ಷಣೆ ಸಮಯ, ಇವುಗಳ ಕಾದಾಟದಿಂದಾಗಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಳಿಕ ಬಂದ್ ಆಗಿದ್ದ ಕೊಡಗಿನ ದುಬಾರೆ ಆನೆ ಶಿಬಿರವನ್ನು ಪ್ರವಾಸಿಗರಿಗಾಗಿ ಸೆ. 20ರಿಂದ ಮರು ತೆರೆಯಲಾಗುವುದು.

ಕಳೆದ ಮೇ 18ರಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ಸಮಯ ಮದವೇರಿದ್ದ ಸಾಕಾನೆ ಕಂಜನ್, ಮತ್ತೊಂದು ಆನೆ ಮಾರ್ತಾಂಡನ ಮೇಲೆರೆಗಿತ್ತು. ಈ ಸಮಯ, ಸ್ನಾನದ ಪ್ರಕ್ರಿಯೆ ವೀಕ್ಷಿಸುತ್ತಿದ್ದ ಪ್ರವಾಸಿ ಮಹಿಳೆ ಜುನೆಸ್ಸಿ (33) ಆನೆಯಡಿಗೆ ಸಿಲುಕಿ ಮೃತಪಟ್ಟಿದ್ದರು. ಅಲ್ಲದೇ ಕಂಜನ್ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಹ ಮೇ 19ರಂದು ಮೃತಪಟ್ಟಿದ್ದನ್ನು ಸ್ಮರಿಸಬಹುದು.

ಹೆಚ್ಚುವರಿ ಭದ್ರತೆ: ದುಬಾರೆ ಆನೆ ಶಿಬಿರದಲ್ಲಿ ಸೆ. 20ರಿಂದ ಪ್ರವಾಸಿಗರ ಪ್ರವೇಶಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರಕ್ಕೆ ಮರು ಜೀವಬಂದಂತಾಗಿದೆ. ಸದ್ಯ ಆನೆ ಶಿಬಿರಗಳಲ್ಲಿ ಹೆಚ್ಚುವರಿ ಸುರಕ್ಷತಾ ನಿಯಮಾವಳಿಗಳನ್ನು ಸರ್ಕಾರದ ಸೂಚನೆಯನ್ವಯ ಜಾರಿಗೆ ತರಲಾಗಿದೆ.