SK Home Ad
Home ನಮ್ಮ ಜಿಲ್ಲೆ ಗದಗ ದೀಪಾವಳಿ ಸಂಭ್ರಮಕ್ಕೆ ಕಬಡ್ಡಿ ಕಳೆ; ಯುವಕರಿಂದ ವಿಭಿನ್ನ ಪ್ರಯೋಗ!

ದೀಪಾವಳಿ ಸಂಭ್ರಮಕ್ಕೆ ಕಬಡ್ಡಿ ಕಳೆ; ಯುವಕರಿಂದ ವಿಭಿನ್ನ ಪ್ರಯೋಗ!

0
16

ಗದಗ: ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ತಾಂಡಾ ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಕಬಡ್ಡಿ ಸ್ಪರ್ಧೆ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದು, ಎಲ್ಲಡೆ ಗಮನ ಸೆಳೆಯುತ್ತಿದೆ.

ಕೆಲವು ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ದೀಪಾವಳಿಯಂದು ದೀಪಗಳನ್ನು ಕಾಯುವ ನೆಪದಲ್ಲಿ ಯುವಕರು ಜೂಜಾಟ, ಇಸ್ಪೇಟ್ ಇತ್ಯಾದಿ ಆಟಗಳ ದಾಸರಾಗುತ್ತಿದ್ದಾರೆ. ಆದರೆ ತಾಲೂಕಿನ ಹರದಗಟ್ಟಿಯ ಕೆಲವು ಯುವಕರು ಹಿರಿಯ ಮಾರ್ಗದರ್ಶನದಲ್ಲಿ ದೀಪಾವಳಿ ಹಬ್ಬದಲ್ಲಿ 2-3 ದಿನ ಗ್ರಾಮದ ಯುವ ಬಳಗದ ವತಿಯಿಂದ ಗ್ರಾಮದಲ್ಲಿ ಸ್ನೇಹಮಯಿ ಕಬಡ್ಡಿ ಪಂದ್ಯಾವಳಿ ಸಂಘಟಿಸಿದ್ದು ಮಾದರಿಯಾಗಿದೆ.

ಕಳೆದ ವರ್ಷ ಕಬಡ್ಡಿ ಪಂದ್ಯಾವಳಿ ಜಾರಿಗೆ ತಂದು ಯಶಸ್ಸು ಕಂಡಿದ್ದ ಯುವ ತಂಡ ಎರಡನೇ ವರ್ಷದಲ್ಲಿಯೂ ಮುಂದುವರೆಸಿದ್ದಾರೆ. ಮೂರು ದಿನಗಳ ಕಾಲ ಬಹುತೇಕ ಯುವಕರು, ಬಾಲಕರು ಕಬ್ಬಡ್ಡಿಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವದನ್ನು ನೋಡಿ ಸಂಘಟಿಕರ ಮನದಲ್ಲಿ ನೆಮ್ಮದಿ ಮೂಡಿದಂತಾಗಿದೆ.

ಹರದಗಟ್ಟಿ ಗ್ರಾಮದ ನಾಯಕ, ಡಾವ್, ಕಾರಭಾರಿ, ಹಿರಿಯರು, ಯುವ ಬಳಗ, ಅಲ್ಲಿನ ನೌಕರರು ಎಲ್ಲರೂ ಈ ಒಂದು ವಿಶಿಷ್ಟ ಪ್ರಯೋಗಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಈ ವರ್ಷ ರವಿವಾರದಿಂದ ಕಬಡ್ಡಿ ಪಂದ್ಯಾವಳಿ ಪ್ರಾರಂಭಿಸಿದ್ದು, ಅಲ್ಲಿನ ಯುವಕರಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಉತ್ಸಾಹ ಕಾಣುವಂತಾಗಿದ್ದು, ಸ್ನೇಹಮಯಿ ಕಬ್ಬಡ್ಡಿ ಪ್ರಿಮಿಯರ್ ಹೆಸರಿನಲ್ಲಿ ಪಂದ್ಯಾವಳಿ ಸಂಘಟಿಸಿದೆ. ಇದರಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ಆಟಗಾರರಿಗೆ ಮೆಡಲ್ಸ್ ನೀಡುವ ಮೂಲಕ ಪ್ರೋತ್ಸಾಹ ನೀಡುವ ಜೊತೆಗೆ ಬೇರೆಡೆ ಯುವಕರು ಗಮನ ಹೋಗದಂತೆ ಮಾಡಿರುವುದು ಇದೀಗ ಎಲ್ಲಡೆ ಮಾದರಿ ಕಾರ್ಯಕ್ರಮ.

ಯುವಕರ ಸಹಕಾರ: ಕಬಡ್ಡಿ ಪಂದ್ಯಾವಳಿ ಸಂಘಟನೆಯ ನೆಪದಲ್ಲಿ ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಯುವಕರನ್ನು ಹಬ್ಬದ ವಾತಾವರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಈ ಪಂದ್ಯಾವಳಿಯ ಉದ್ದೇಶ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚೆಚ್ಚು ಪ್ರೋತ್ಸಾಹ ದೊರೆಯುತ್ತಿದ್ದು, ನಮ್ಮ ಯುವಶಕ್ತಿಯ ಸಾಮರ್ಥ್ಯ ಅಪಾರ. ಅದರ ಸದ್ವನಿಯೋಗವಾಗಬೇಕು ಎಂಬುದು ನಮ್ಮ ಹಿರಿಯರ ಉದ್ದೇಶ. ಎಲ್ಲರ ಉದ್ದೇಶಕ್ಕೆ ತಕ್ಕಂತೆ ಯುವಕರು ಸಹಕಾರ ನೀಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹರದಗಟ್ಟಿ ಬಂಜಾರ ಸಮಾಜದ ಯುವ ಮುಖಂಡ ಪರಮೇಶ ಲಮಾಣಿ ಸಂತಸಪಟ್ಟಿದ್ದಾರೆ.