SK Home Ad
Home ಕ್ರೀಡೆ IPL 2026: ಅಗ್ರಸ್ಥಾನಕ್ಕಾಗಿ ಗುಜರಾತ್‌-ಹೈದರಾಬಾದ್‌ ಕದನ

IPL 2026: ಅಗ್ರಸ್ಥಾನಕ್ಕಾಗಿ ಗುಜರಾತ್‌-ಹೈದರಾಬಾದ್‌ ಕದನ

0
208

ಅಹಮದಾಬಾದ್: ಐಪಿಎಲ್ 2026ರ ಪ್ಲೇಆಫ್ ರೇಸ್ ಈಗ ರೋಚಕ ಘಟ್ಟ ತಲುಪಿದ್ದು, ಮಂಗಳವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಪ್ರಸ್ತುತ ಉಭಯ ತಂಡಗಳು ತಲಾ 14 ಅಂಕಗಳನ್ನು ಹೊಂದಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು 16 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.

ಶುಭಮನ್ ಗಿಲ್ ನೇತೃತ್ವದ ಗುಜರಾತ್ ತಂಡವು ಸತತ ನಾಲ್ಕು ಗೆಲುವುಗಳೊಂದಿಗೆ ಅಬ್ಬರಿಸುತ್ತಿದ್ದರೆ, ಪ್ಯಾಟ್ ಕಮಿನ್ಸ್ ಸಾರಥ್ಯದ ಹೈದರಾಬಾದ್ ಕೂಡ ಕಳೆದ ಏಳು ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದೆ.

ಈವರೆಗಿನ ಮುಖಾಮುಖಿ ಲೆಕ್ಕಾಚಾರದಲ್ಲಿ ಗುಜರಾತ್ 5-1 ಅಂತರದ ಸ್ಪಷ್ಟ ಮೇಲುಗೈ ಸಾಧಿಸಿದೆ. ಅಹಮದಾಬಾದ್ ಪಿಚ್ ಇತ್ತೀಚಿನ ಪಂದ್ಯಗಳಲ್ಲಿ ನಿಧಾನಗತಿಯ ಸ್ವರೂಪ ಪಡೆದುಕೊಂಡಿದ್ದು, ಟಾಸ್ ಗೆಲ್ಲುವ ನಾಯಕರು ಚೇಸಿಂಗ್‌ಗೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಎರಡೂ ಬಲಿಷ್ಠ ತಂಡಗಳ ನಡುವಿನ ಈ ಕಾದಾಟ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.