SK Home Ad
Home ಸುದ್ದಿ Samyukta Karnataka News Live: ಮನೋವೈದ್ಯ, ಪ್ರೇರಣಾದಾಯಿ ವಾಗ್ಮಿ ಡಾ. ಆನಂದ ಪಾಂಡುರಂಗಿ ನಿಧನ

Samyukta Karnataka News Live: ಮನೋವೈದ್ಯ, ಪ್ರೇರಣಾದಾಯಿ ವಾಗ್ಮಿ ಡಾ. ಆನಂದ ಪಾಂಡುರಂಗಿ ನಿಧನ

0
166

ಧಾರವಾಡದ ಹಿರಿಯ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ : ಕರ್ನಾಟಕದ ಹಿರಿಯ ಮನೋವೈದ್ಯ, ಪ್ರೇರಣಾದಾಯಿ ವಾಗ್ಮಿ ಹಾಗೂ ಅಂಕಣಕಾರ ಡಾ. ಆನಂದ ಪಾಂಡುರಂಗಿ ನಿಧನ ಹೊಂದಿದ್ದಾರೆ. ಧಾರವಾಡದಲ್ಲಿ ದೀರ್ಘಕಾಲ ಮನೋವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಆನಂದ ಪಾಂಡುರಂಗಿ ಅವರು ವೈದ್ಯಕೀಯ ಸೇವೆಯ ಜತೆಗೆ ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಕ್ರಿಯರಾಗಿದ್ದರು. ವಿದ್ಯಾರ್ಥಿಗಳು, ಯುವಜನರು ಹಾಗೂ ಕುಟುಂಬಗಳಿಗೆ ಮಾರ್ಗದರ್ಶನ ನೀಡುವುದು, ವ್ಯಕ್ತಿತ್ವ ವಿಕಸನ ಮತ್ತು ಆತ್ಮವಿಶ್ವಾಸದ ಕುರಿತು ಉಪನ್ಯಾಸಗಳನ್ನು ನೀಡುವುದು ಅವರ ಸಾಮಾಜಿಕ ಚಟುವಟಿಕೆಗಳ ಪ್ರಮುಖ ಭಾಗವಾಗಿತ್ತು. ಅವರ ವೃತ್ತಿಪರ ಪರಿಚಯದಲ್ಲಿ ವಿದ್ಯಾರ್ಥಿ ಮಾರ್ಗದರ್ಶನ, ಪೋಷಕರ ಸಮಾಲೋಚನೆ, ಕಿಶೋರರ ಆರೈಕೆ ಮತ್ತು ವ್ಯಸನಮುಕ್ತಿ ಸೇವೆಗಳನ್ನೂ ಸಲ್ಲಿಸಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಒಮಾನ್ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ – ಭಾರತೀಯ ನಾವಿಕ ಸಾವು : ಒಮಾನ್‌ನ ಪೂರ್ವ ಕರಾವಳಿ ಸಮೀಪ ವಾಣಿಜ್ಯ ಹಡಗು MV Cape Dao ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಪೈಕಿ 19 ಮಂದಿಯನ್ನು ರಕ್ಷಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಮೇಲಿನ ದಾಳಿಗಳು ತಕ್ಷಣವೇ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಂಕಣ ಬರಹ | ಕಲ್ಯಾಣ-ಕರಾವಳಿ ಬದುಕಿಗೆ ಬೇಕಿಲ್ಲ ಭಾವನೆಯ ಆಟ! : ಸಂಯುಕ್ತ ಕರ್ನಾಟಕ ಕಾರ್ಯನಿರ್ವಾಹಕ ಹಾಗೂ ಸಂಪಾದಕರಾದ ಮೋಹನ ಹೆಗಡೆ ಅವರ ಅಂಕಣ ಗುರುವಾರ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಕಲ್ಯಾಣ ಕರ್ನಾಟಕದಿಂದ ಕರಾವಳಿ ಕರ್ನಾಟಕದವರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈಗೊಂಡ ಪ್ರವಾಸ ಕುರಿತಂತೆ ಹಾಗೂ ಜನರ ಭಾವನೆಗಳಿಗೆ ಸ್ಪಂದಿಸುವ ಘೋಷಣೆಗಳ ಜೊತೆಗೆ ಶಿಕ್ಷಕರ ನೇಮಕಾತಿ, 371(ಜೆ), ಮೂಲಸೌಕರ್ಯ, ಭೂಮಿ-ಪುನರ್ವಸತಿ, CRZ, ಅರಣ್ಯ ಕಾಯ್ದೆ ಹಾಗೂ ಕಸ್ತೂರಿರಂಗನ್ ವರದಿಯಂತಹ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕೆಂದು ಲೇಖಕರು ಪ್ರಶ್ನಿಸುತ್ತಾರೆ. ಜನರ ಭಾವನೆಗಳನ್ನು ಗೌರವಿಸುವ ರಾಜಕಾರಣದ ಜೊತೆಗೆ ಅವರ ನೈಜ ಬದುಕಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆಯೇ? ಎಂಬುದು. ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಭಾಗದ ಜನರಿಗೆ ಘೋಷಣೆಗಳಿಗಿಂತ ಶಿಕ್ಷಣ, ಉದ್ಯೋಗ, ನೀರು, ರಸ್ತೆ, ಭೂಮಿ, ಪುನರ್ವಸತಿ ಮತ್ತು ಮೂಲಭೂತ ಸೌಲಭ್ಯಗಳ ಖಚಿತತೆ ಅಗತ್ಯ ಎಂದು ಈ ಲೇಖನದಲಿ ಹೇಳಲಾಗಿದ್ದು. “ಭಾವನೆಗಳ ರಾಜಕಾರಣ”ಕ್ಕಿಂತ “ಬದುಕಿನ ರಾಜಕಾರಣ”ಕ್ಕೆ ಆದ್ಯತೆ ನೀಡಬೇಕು, ಘೋಷಿತ ಯೋಜನೆಗಳು ಕಾರ್ಯರೂಪಕ್ಕೆ ಬಂದು ಜನರ ಬದುಕಿನಲ್ಲಿ ಬದಲಾವಣೆ ತರಬೇಕು ಎಂಬ ಆಶಯವೇ ಅಂಕಣದ ಮುಖ್ಯ ಸಂದೇಶ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

(ಮಾಹಿತಿ ಅಪ್​ಡೇಟ್ ಆಗಲಿದೆ)