SK Home Ad
Home ಸುದ್ದಿ ರಾಜ್ಯ ಉದ್ಯಮಿಗಳ ಸಾಲಮನ್ನಾ ಆಯ್ತು: ರೈತರ ಸಾಲಮನ್ನಾ ಏಕಿಲ್ಲ?

ಉದ್ಯಮಿಗಳ ಸಾಲಮನ್ನಾ ಆಯ್ತು: ರೈತರ ಸಾಲಮನ್ನಾ ಏಕಿಲ್ಲ?

0
4

ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಡಾ. ಮನಮೋಹನ್ ಸಿಂಗ್ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ಮೋದಿ ಅವರು ಕೇವಲ ದೊಡ್ಡ ದೊಡ್ಡ ಉದ್ಯಮಪತಿಗಳ ಸಾಲವನ್ನು ಮಾತ್ರ ಮನ್ನಾ ಮಾಡಿದ್ದಾರೆ. ಇದನ್ನೂ ಬೆಂಬಲಿಸುವ ಬಿಜೆಪಿ ಕೆಲವು ನಾಯಕರು ಅದು ಸಾಲಮನ್ನಾ ಅಲ್ಲ, ರೈಟ್ ಆಫ್ ಇದ್ದಂತೆ ಎಂದು ಹೇಳಿದ್ದಾರೆ, ಇದೇ ರೀತಿ ನಮ್ಮ ರೈತರ ಸಾಲವನ್ನು ಸಹ ಮನ್ನಾ ಮಾಡಿಬಿಡಿ, ಅಂಬಾನಿ, ಅದಾನಿಯಂತೆ ಅನ್ನದಾತನರನ್ನು ತಿಳಿದುಕೊಂಡು ಸಾಲಮನ್ನಾ ಮಾಡಿ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರ ಬರಗಾಲದ ವಿಷಯವಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ, ಮಳೆ ಆಧಾರಿತ ಕೃಷಿ ಶೇ. 100 ರಷ್ಟು ಹಾನಿಯಾಗಿದೆ, ಹತ್ತಿ, ಕಬ್ಬು, ತೊಗರಿ, ಸೂರ್ಯಪಾನ ಹೀಗೆ ಬಹುತೇಕ ಬೆಳೆಗಳು ಹಾನಿಯಾಗಿವೆ, ಈ ರೀತಿ ಎಲ್ಲಿ ಭೀಕರ ಪರಿಸ್ಥಿತಿ ಉಂಟಾಗಿದೆಯೋ ಅಲ್ಲಿ ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು, ಕೇಂದ್ರ ಬರ ಮಾರ್ಗಸೂಚಿ ಪರಿಷ್ಕರಣೆ ಮಾಡಬೇಕು. ಆದರೆ ಈ ಕೇಂದ್ರ ಸರ್ಕಾರ ವೋಟ್ ಚೋರಿ, ವಾಷಿಂಗ್ ಮಷೀನ್ ಮಾತ್ರ ಗೊತ್ತಿದೆ, ಉಳುವವನೇ ಹೊಲದೊಡೆಯ ಎಂಬ ಯೋಜನೆಗಳನ್ನು ಯಾವತ್ತೂ ರೂಪಿಸಿಲ್ಲ ಎಂದರು.

ಅನೇಕರು ಭ್ರಷ್ಟರು ಎಂದು ಮೊದಲು ದೂರಿ ನಂತರ ಅವರನ್ನೇ ಪಕ್ಷಕ್ಕೆ ಕರೆದುಕೊಂಡು ಬಿಜೆಪಿಯವರು ಹೊಗಳಿದ್ದಾರೆ. ಈಗ ಬಿಜೆಪಿ ರಿವರ್ಸ್ ಸೈಕಲ್ ಆರಂಭವಾಗಿದೆ, ಅವರ ಕರಾಳ ಮುಖ ಝೆನ್ ಜೀ ಹೋರಾಟದಿಂದ ತಿಳಿದು ಬರುತ್ತಿದೆ ಎಂದರು.