SK Home Ad
Home ಸುದ್ದಿ ರಾಜ್ಯ ಡಿಕೆಶಿ ಸ್ಟಿಂಗ್‌ಗೆ ಸಿದ್ದರಾಮಯ್ಯ ಬಲಿ: ಕುಮಾರಸ್ವಾಮಿ ಸ್ಫೋಟಕ ಆರೋಪ

ಡಿಕೆಶಿ ಸ್ಟಿಂಗ್‌ಗೆ ಸಿದ್ದರಾಮಯ್ಯ ಬಲಿ: ಕುಮಾರಸ್ವಾಮಿ ಸ್ಫೋಟಕ ಆರೋಪ

0
25

ಬೆಂಗಳೂರು: ಸಿಂಗಾಪುರ ಪ್ರವಾಸದಿಂದ ವಾಪಸಾದ ಬಳಿಕ ‘ದೇಶವೇ ಅಲ್ಲೋಲಕಲ್ಲೋಲ ಆಗುವಂತಹ ಸುದ್ದಿ ಹೇಳುತ್ತೇನೆ’ ಎಂದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ನಡೆಸಿದ ಸ್ಟಿಂಗ್ ಆಪರೇಷನ್‌ನಿಂದಲೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು’ ಎಂದು ಆರೋಪಿಸಿದರು.

ಸಂಪುಟ ವಿಸ್ತರಣೆ ಚರ್ಚೆಗೆಂದು ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ವಿಚಾರ ತಿಳಿಸಿ ರಾಜೀನಾಮೆ ಪಡೆಯಲಾಯಿತು. ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ ಎಂದು ಕುಮಾರಸ್ವಾಮಿ ದೂರಿದರು.

ಡಿಕೆಶಿ ಜತೆ ಕೆಲವು ಮಾಧ್ಯಮ ಸಂಸ್ಥೆಗಳು ಹಾಗೂ ಕಾಂಗ್ರೆಸ್ ಹೈಕಮಾಂಡ್ ಶಾಮೀಲಾಗಿವೆ ಎಂದು ಆರೋಪಿಸಿದ ಅವರು, ರಮೇಶ್ ಜಾರಕಿಹೊಳಿ, ರಾಜಣ್ಣ ಸೇರಿದಂತೆ ಹಲವರ ವಿರುದ್ಧ ನಡೆದ ಸ್ಟಿಂಗ್‌ಗಳ ಹಿಂದೆ ಇದೇ ರೀತಿಯ ವ್ಯವಸ್ಥೆ ಇದೆ ಎಂದು ದೂರಿದರು.

‘ಹಿಂದೆ ಸಂಪುಟ ಸಭೆಗಳಲ್ಲಿ ಅಭಿವೃದ್ಧಿ ವಿಚಾರ ಚರ್ಚೆಯಾಗುತ್ತಿತ್ತು. ಈಗ ಹನಿಟ್ರ್ಯಾಪ್, ಸ್ಟಿಂಗ್ ಆಪರೇಷನ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದು ರಾಜ್ಯದ ದುಸ್ಥಿತಿ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾವು ಸ್ಟಿಂಗ್ ಆಪರೇಷನ್ ಮಾಡಿದ್ದರೆ ತನಿಖೆ ನಡೆಸಲಿ. ಸರ್ಕಾರದ ಬಳಿ ಎಸ್‌ಐಟಿ ಇದೆ, ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.