SK Home Ad
Home ಸುದ್ದಿ ರಾಜ್ಯ 18 ಕೈ ನಾಯಕರಿಗೆ ನಿಗಮ-ಮಂಡಳಿ ಪಟ್ಟ: ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್

18 ಕೈ ನಾಯಕರಿಗೆ ನಿಗಮ-ಮಂಡಳಿ ಪಟ್ಟ: ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್

0
65
(File Photo) BMTC, ಪ್ರವಾಸೋದ್ಯಮ, ಖನಿಜ ನಿಗಮ ಸೇರಿ ಪ್ರಮುಖ ಮಂಡಳಿಗಳಿಗೆ ಅಧ್ಯಕ್ಷರ ಪ್ರಸ್ತಾವನೆ

ಕಾಂಗ್ರೆಸ್‌ನಿಂದ ನಿಗಮ ಮಂಡಳಿ ನೇಮಕದ ಮುಂದಿನ ಹಂತ: 18 ಹೆಸರುಗಳಿಗೆ ಎಐಸಿಸಿ ಅನುಮೋದನೆ

ಬೆಂಗಳೂರು: ಕರ್ನಾಟಕದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಮುಖ ಹುದ್ದೆಗಳಿಗೆ ಶಾಸಕರು ಮತ್ತು ಕಾಂಗ್ರೆಸ್ ನಾಯಕರನ್ನು ನೇಮಕ ಮಾಡುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನವೆಂಬರ್ 20ರಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಒಟ್ಟು 18 ಶಾಸಕರು ಮತ್ತು ನಾಯಕರ ಹೆಸರುಗಳನ್ನು ಉಲ್ಲೇಖಿಸಿ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಪಟ್ಟಿಯಲ್ಲಿ ಯಾರಿಗೆ ಯಾವ ಜವಾಬ್ದಾರಿ?

ಎಐಸಿಸಿ ಪತ್ರದ ಎರಡನೇ ಪುಟದಲ್ಲಿರುವ ಪಟ್ಟಿಯ ಪ್ರಕಾರ, 18 ಮಂದಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ, ಮುಖ್ಯ ಸಚೇತಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗಳನ್ನು ಪ್ರಸ್ತಾಪಿಸಲಾಗಿದೆ.

ಕ್ರ ಸಂಖ್ಯೆಹೆಸರುಪ್ರಸ್ತಾಪಿತ ಹುದ್ದೆ
01ಬಿ. ಶಿವಣ್ಣಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
02ಕೆ. ಶಡಕ್ಷರಿಕರ್ನಾಟಕ ರಾಜ್ಯ ಖನಿಜ ನಿಗಮ ಅಧ್ಯಕ್ಷ
03ಪಿ.ಎಂ. ಅಶೋಕ್ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ
04ಎ.ಆರ್. ಕೃಷ್ಣಮೂರ್ತಿಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ಅಧ್ಯಕ್ಷ
05ಹಂಪನಗೌಡ ಬಾದರ್ಲಿಕರ್ನಾಟಕ ರಾಜ್ಯ ಗೋದಾಮು ನಿಗಮ ಅಧ್ಯಕ್ಷ
06ಡಿ.ಜಿ. ಶಾಂತನಗೌಡಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ ಅಧ್ಯಕ್ಷ
07ಜಿ.ಎಚ್. ಶ್ರೀನಿವಾಸ್ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ
08ಮಹಾಂತೇಶ ಕೌಜಲಗಿಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ
09ಎಸ್.ಎನ್. ಸುಬ್ಬಾರೆಡ್ಡಿಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ
10ಬೆಲೂರು ಗೋಪಾಲಕೃಷ್ಣವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ
11ತನ್ವೀರ್ ಸೇಠ್ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ
12ಎನ್.ಎಚ್. ಕೋನರಡ್ಡಿಕರ್ನಾಟಕ ಕೃಷಿ ಬೆಲೆ ಆಯೋಗ ಅಧ್ಯಕ್ಷ
13ಬಸನಗೌಡ ದದ್ದಲ್ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ
14ಮಂಜುನಾಥ ಭಂಡಾರಿವಿಧಾನ ಪರಿಷತ್ ಮುಖ್ಯ ಸಚೇತಕ
15ಅಲ್ಲಂಪ್ರಭು ಪಾಟೀಲ್ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ
16ಶ್ಯಾಮ್ ನಾಟೇಕರ್ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ
17ಎಚ್.ಸಿ. ಲಲಿತ್ ರಾಘವಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ಅಧ್ಯಕ್ಷ
18ಸುಭಾಷ್ ರಾಥೋಡ್ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ

ನಿಗಮ ಮಂಡಳಿ ನೇಮಕಾತಿಯ ಮುಂದಿನ ಹಂತ : ರಾಜ್ಯದಲ್ಲಿ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನೇಮಕಾತಿ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುತ್ತಿದೆ. ನವೆಂಬರ್ 12ರಂದು ವಿವಿಧ ಸಂಸ್ಥೆಗಳಿಗೆ 428 ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆದಿತ್ತು.