ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸುವ ಭಾರತವೂ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇ. 100 ರಷ್ಟು ಸುಂಕವನ್ನು ವಿಧಿಸಲು ಅಮೆರಿಕ ಸಂಸತ್ತಿನಲ್ಲಿ ಸಿದ್ಧತೆ ನಡೆಸಲಾಗಿದೆ.
ಈ ಕುರಿತು ಮಸೂದೆಯೊಂದನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆಯಲ್ಲಿ) ಈ ಮಸೂದೆಯನ್ನು ಮಂಡಿಸಲಾಗಿದ್ದು, ಅಂತಿಮ ಮತದಾನ ಇನ್ನಷ್ಟೇ ನಡೆಯಬೇಕಾಗಿದೆ.
ಮುಂದಿನ ದಿನಗಳಲ್ಲಿ ಈ ಮಸೂದೆಯು ಬಹುಮತದಿಂದ ಸ್ವೀಕಾರಗೊಂಡು ಜಾರಿಯಾದರೆ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ. 100 ರಷ್ಟು ಸುಂಕ ವಿಧಿಸುವ ಅಧಿಕಾರ ಟ್ರಂಪ್ಗೆ ಸಿಗಲಿದೆ.
ಈ ಮಸೂದೆಯನ್ನು ಕೆಲವು ತಿಂಗಳ ಹಿಂದೆಯೇ ರೂಪಿಸಲಾಗಿತ್ತು. ಯುಎಸ್ ಸೆನೆಟರ್ ಆಗಿದ್ದ, ಇತ್ತೀಚೆಗೆ ನಿಧನರಾದ ಸೆನೆಟರ್ ಲಿಂಡ್ಸೆ ಗ್ರಾಹಮ್ ಅವರು ಈ ಮಸೂದೆಯ ಕರಡು ಸಿದ್ಧಪಡಿಸಲು ಹೆಚ್ಚಿನ ಶ್ರಮ ವಹಿಸಿದ್ದರು ಹಾಗೂ ಡೆಮಾಕ್ರೆಟಿಕ್ ಶಾಸಕರು ಕೂಡ ಬೆಂಬಲ ನೀಡುವಂತೆ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಕಾರಣದಿಂದ ಈ ಮಸೂದೆಗೆ ʻಲಿಂಡ್ಲೆ ಒ ಗ್ರಾಹಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ 2026′ ಎಂದೇ ಹೆಸರಿಡಲಾಗಿದೆ. ಮೇಲ್ಮನೆಯಲ್ಲಿ ಇಬ್ಬರು ಡೆಮಾಕ್ರೆಟಿಕ್ ಸದಸ್ಯರೂ ಪರವಾಗ ಮತ ಚಲಾಯಿಸಿದ ಹಿನ್ನೆಲೆಯಲ್ಲಿ 214-211 ಮತಗಳ ಅಂತರದಿಂದ ಅಂಗೀಕಾರಗೊಂಡಿತ್ತು.






















