SK Home Ad
Home ಸುದ್ದಿ ದೇಶ ಫ್ರಾನ್ಸ್ ಶಿಕ್ಷಣ ಸಚಿವರಿಗೆ ‘ಬಿದ್ರಿವೇರ್’ ಉಡುಗೊರೆ

ಫ್ರಾನ್ಸ್ ಶಿಕ್ಷಣ ಸಚಿವರಿಗೆ ‘ಬಿದ್ರಿವೇರ್’ ಉಡುಗೊರೆ

0
7

ನವದೆಹಲಿ: ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಕರ್ನಾಟಕದ ವಿಶಿಷ್ಟ ʻಬಿದ್ರಿವೇರ್ʼ ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಕರುನಾಡಿನ ಬಿದ್ರಿ ಕಲೆಯ ಹಿರಿಮೆ ಹೆಚ್ಚಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಫ್ರಾನ್ಸ್‌ ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರನ್ನು ಆದರದಿಂದ ಸ್ವಾಗತಿಸಿದ ಜೋಶಿ ಅವರು, ಕೊನೆಗೆ ನೆನಪಿನ ಕಾಣಿಕೆಯಾಗಿ ʻಬಿದ್ರಿ ವೇರ್ʼ ಕಲಾಕೃತಿ ನೀಡಿ ಶುಭ ಕೋರಿದರು.

ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕರ್ನಾಟಕದ ಸಂಪ್ರದಾಯಿಕ ಈ ʻಬಿದ್ರಿವೇರ್ʼ ಕಲೆ, ಕಲಾಕೃತಿ ವೈಶಿಷ್ಟ್ಯತೆ ಕುರಿತು ವಿಶ್ಲೇಷಣೆ ನೀಡಿ ಗಮನ ಸೆಳೆದರು. ʻಬಿದ್ರಿ ವೇರ್ʼಗೆ 500 ವರ್ಷಗಳ ಸುದೀರ್ಘ ಇತಿಹಾಸವಿದ್ದು, ವಿಶಿಷ್ಟ ಕಲೆ, ಸಂಸ್ಕೃತಿಗೆ ಹೆಸರಾದ ನಮ್ಮ ಕರ್ನಾಟಕದ ಬೀದರ್‌ನ ಅಪರೂಪದ ಕಲಾಕೃತಿಯಾಗಿದೆ ಎನ್ನುತ್ತಲೇ ಫ್ರಾನ್ಸ್ ಶಿಕ್ಷಣ ಸಚಿವರು ಅಭಿಮಾನ ತೋರಿದರು.