SK Home Ad
Home ತಾಜಾ ಸುದ್ದಿ ಬಿಜೆಪಿಯ ಪ್ರತಿಯೊಂದು ಹುಳುಕು ಬಿಚ್ಚಿಡುವೆ

ಬಿಜೆಪಿಯ ಪ್ರತಿಯೊಂದು ಹುಳುಕು ಬಿಚ್ಚಿಡುವೆ

0
102
ಲಕ್ಷಣ ಸವದಿ

ಹಾರೂಗೇರಿ: ಬಿಜೆಪಿ ಮೋಸ ಮಾಡುವುದರಲ್ಲಿ ನಂಬರ್ ಒನ್ ಪಕ್ಷ. ಸುಳ್ಳು ಭರವಸೆ ನೀಡಿ ಬರೀ ತಮ್ಮ ಸ್ವಾರ್ಥ ಚಿಂತನೆ ಮಾಡುವ ಬಿಜೆಪಿಯ ಪ್ರತಿಯೊಂದು ಹುಳುಕುಗಳನ್ನು ಮುಂದೆ ತಿಳಿಸುತ್ತೇನೆ ಎಂದು ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸ್ಥಳೀಯ ಪುರಸಭೆ ಆವರಣದಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪ್ರಚಾರಾರ್ಥ ಹಮ್ಮಿಕೊಂಡ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಗೆಲ್ಲಿಸಿದಂತೆ ಈ ಬಾರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಉಡಿ ತುಂಬಿ ಕಳುಹಿಸಿ ಎಂದರು.
ಕಾಂಗ್ರೆಸ್‌ನ ಗಂಡಸ್ತನದ ಬಗ್ಗೆ ಕೇಳುವ ಯಡಿಯೂರಪ್ಪನವರೇ ಮೊದಲು ನಿಮಗೆ ವಯಸ್ಸಾಗಿದೆ ಸುಮ್ಮನಿರಬೇಕು. ಮೋದಿ ಹೋದ ನಂತರ ಮುಂದೆ ನೀವು ಯಾವ ಗಂಡಸನನ್ನು ತರುತ್ತೀರಿ ಎಂದು ಪ್ರಶ್ನಿಸಿದರು.