ಐಪಿಎಲ್ ಆಟಗಾರಿಕೆಯ ಪಯಣ ಅಂತ್ಯಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಅಭಿಮಾನಿಗಳಿಗೆ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಧೋನಿ ಅವರ ಕ್ರಿಕೆಟ್ ಜೀವನದುದ್ದಕ್ಕೂ ಪ್ರೀತಿ, ಬೆಂಬಲ ನೀಡಿದ ಅಭಿಮಾನಿಗಳಿಗೆ ಸಾಕ್ಷಿ ಧನ್ಯವಾದ ತಿಳಿಸಿದ್ದಾರೆ.
ಐಪಿಎಲ್ 2027ರ ಸೀಸನ್ಗೆ ಮುನ್ನ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ಮೆಂಟರ್ ಆಗಿ ನೇಮಕ ಮಾಡಿರುವುದಾಗಿ ಮಂಗಳವಾರ ಫ್ರಾಂಚೈಸಿ ಘೋಷಿಸಿದೆ. ಈ ಮೂಲಕ ಐಪಿಎಲ್ನಲ್ಲಿ ಆಟಗಾರನಾಗಿ ಅವರ 19 ವರ್ಷಗಳ ಪಯಣಕ್ಕೆ ತೆರೆ ಬಿದ್ದಿದೆ.
ಇನ್ಸ್ಟಾಗ್ರಾಂನಲ್ಲಿ ಧೋನಿ ಅವರ ಫೋಟೋ ಹಂಚಿಕೊಂಡಿರುವ ಸಾಕ್ಷಿ,”ಕೆಲವು ಅಧ್ಯಾಯಗಳು ಅಂತ್ಯಗೊಂಡಾಗಲೇ ಸುಂದರವಾದ ಹೊಸ ಅಧ್ಯಾಯಗಳು ಆರಂಭವಾಗುತ್ತವೆ.” ಇಷ್ಟು ವರ್ಷಗಳ ಕಾಲ ಮಾಹಿಗೆ ಪ್ರೀತಿ, ಬೆಂಬಲ ಮತ್ತು ವಿಶ್ವಾಸ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ.
ಹೊಸ ಆರಂಭಗಳು, ಹೊಸ ಸಾಹಸಗಳು ಮತ್ತು ಸುಂದರ ನೆನಪುಗಳಿಗೆ ಸ್ವಾಗತ. ನಿನ್ನ ಬಗ್ಗೆ ಹೆಮ್ಮೆ ಇದೆ ಮಾಹಿ” ಎಂದು ಹಂಚಿಕೊಂಡಿದ್ದಾರೆ.





















