ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ ಒನ್’ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ 13 ದಿನಗಳಲ್ಲಿ ವಿಶ್ವದಾದ್ಯಂತ ₹1,483.50 ಕೋಟಿ ಗಳಿಸಿದ್ದು, ₹1,500 ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಭಾರತದಲ್ಲಿ 13ನೇ ದಿನ ₹28.70 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ. ಇದರೊಂದಿಗೆ ಭಾರತದ ಒಟ್ಟು ನಿವ್ವಳ ಗಳಿಕೆ ₹821.30 ಕೋಟಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲಿ ₹502 ಕೋಟಿ ಗಳಿಸಿರುವುದು ಚಿತ್ರದ ಜಾಗತಿಕ ಗಳಿಕೆಗೆ ಮತ್ತಷ್ಟು ಬಲ ನೀಡಿದೆ.
ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿ ಅಗ್ರಸ್ಥಾನದಲ್ಲಿದ್ದು, ₹21 ಕೋಟಿ ಗಳಿಸಿದೆ. ಮಲಯಾಳಂ ₹2.35 ಕೋಟಿ, ಕನ್ನಡ ₹2.10 ಕೋಟಿ, ತಮಿಳು ₹1.75 ಕೋಟಿ ಹಾಗೂ ತೆಲುಗು ₹1.50 ಕೋಟಿ ಗಳಿಸಿವೆ.
ಎರಡನೇ ಮಂಗಳವಾರದಂದು ಚಿತ್ರದ ಗಳಿಕೆಯಲ್ಲಿ ಹಿಂದಿನ ದಿನಕ್ಕೆ ಹೋಲಿಸಿದರೆ ಶೇ.10.3ರಷ್ಟು ಇಳಿಕೆ ಕಂಡುಬಂದಿದೆ. ಆದರೂ ವಿಶ್ವದಾದ್ಯಂತ ₹1,500 ಕೋಟಿ ಗಡಿ ದಾಟುವ ನಿರೀಕ್ಷೆ ಮೂಡಿಸಿದೆ.
ಇನ್ನು ರಾಮಾಯಣ ಸಿನಿಮಾ ಬಿಡುಗಡೆಯಾದ ಮೊದಲ ವಾರದ ಕಲೆಕ್ಷನ್ ₹564.05 ಕೋಟಿ ದಿಂದ 675.05 ಕೋಟಿ. ಪ್ರಸ್ತೂತ ಎರಡನೆ ವಾರದಲ್ಲಿ ಭಾರತದಲ್ಲಿ ₹310 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ವಿಶ್ವಾದ್ಯಂತ ₹1500 ಕೋಟಿ ಬಾಕ್ಸ್ ಆಫೀಸ್ ಸೇರುವ ಮೂಲಕ ರಾಮಾಯಣ ಹೆಜ್ಜೆಗುರುತು ಮೂಡಿಸುವ ಮತ್ತು 5ನೇ ಸಿನಿಮಾ ದಾಖಲೆ ಬರೆಯುವ ನಿರೀಕ್ಷೆ ಇದೆ.






















