SK Home Ad
Home ಸಿನಿ ಮಿಲ್ಸ್ ಬಿಗ್‌ಬಾಸ್‌ ರಾದ್ಧಾಂತ: ಬಾಯ್‌ಫ್ರೆಂಡ್, ರಿಲೇಶನ್‌ಷಿಪ್ ವಿಚಾರ ಕೆದಕಿ ಕಿತ್ತಾಡಿದ ಗಾನವಿ ಗೌಡ ಮತ್ತು ಸೌಂದರ್ಯ ಶೆಟ್ಟಿ!

ಬಿಗ್‌ಬಾಸ್‌ ರಾದ್ಧಾಂತ: ಬಾಯ್‌ಫ್ರೆಂಡ್, ರಿಲೇಶನ್‌ಷಿಪ್ ವಿಚಾರ ಕೆದಕಿ ಕಿತ್ತಾಡಿದ ಗಾನವಿ ಗೌಡ ಮತ್ತು ಸೌಂದರ್ಯ ಶೆಟ್ಟಿ!

0
18

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ‘ಮಹಾರಾಣಿ’ ಪಟ್ಟಕ್ಕಾಗಿ ನಡೆಯುತ್ತಿರುವ ಯುವರಾಣಿಯರ ಪೈಪೋಟಿ ಇದೀಗ ಆಟದ ಮಿತಿಯನ್ನು ಮೀರಿ ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿದೆ. ನಾಮಿನೇಷನ್ ತಂತ್ರಗಾರಿಕೆಯಿಂದ ಆರಂಭವಾದ ಜಗಳದಲ್ಲಿ ಯುವರಾಣಿಯರಾದ ಗಾನವಿ ಗೌಡ ಮತ್ತು ಸೌಂದರ್ಯ ಶೆಟ್ಟಿ, ಪರಸ್ಪರರ ಪ್ರೀತಿ ಹಾಗೂ ಬ್ರೇಕಪ್ ವಿಚಾರಗಳನ್ನು ಕೆದಕಿ ತೀವ್ರವಾಗಿ ಕಿತ್ತಾಡಿದ್ದಾರೆ.

ಮೂವರು ಯುವರಾಣಿಯರ ನಡುವಿನ ಟಾಸ್ಕ್‌ನಲ್ಲಿ ಮೊದಲಿನಿಂದಲೂ ಮೈತ್ರಿ ಹಾಗೂ ತಂತ್ರ-ಕುತಂತ್ರಗಳು ನಡೆಯುತ್ತಿವೆ. ಇತ್ತೀಚಿನ ಸುತ್ತಿನಲ್ಲಿ ಆಸಿಯಾ ಫಿರ್ದೋಸ್ ಮತ್ತು ಗಾನವಿ ಗೌಡ ಮೈತ್ರಿ ಮಾಡಿಕೊಂಡು ಗೆಲುವು ಸಾಧಿಸಿದ್ದು, ಆಸಿಯಾ ಅವರು ನಾಮಿನೇಷನ್ ಕತ್ತಿಯನ್ನು ಸೌಂದರ್ಯ ಶೆಟ್ಟಿ ಕೈಗಿತ್ತಿದ್ದಾರೆ. ಸೌಂದರ್ಯ ತಂಡದ ತಾಂಡವ್ ರಾಮ್ ಹಾಗೂ ಜಗದೀಶ್ ಈಗಾಗಲೇ ನಾಮಿನೇಟ್ ಆಗಿದ್ದು, ಉಳಿದಿರುವ ಯಶಸ್ ಕೃಷ್ಣ ನಾಮಿನೇಟ್ ಆದರೆ ಸೌಂದರ್ಯ ಕೂಡ ನೇರವಾಗಿ ನಾಮಿನೇಟ್ ಆಗಲಿದ್ದಾರೆ.

ಇದರಿಂದ ಕೆರಳಿದ ಸೌಂದರ್ಯ ಶೆಟ್ಟಿ ನಾಮಿನೇಷನ್ ಕತ್ತಿಯನ್ನು ಎಸೆದು, “ನಾವು ಪ್ರಾಮಾಣಿಕವಾಗಿ ಆಡಿದ್ದೇವೆ, ಆದರೆ ಆಸಿಯಾ ಮತ್ತು ಗಾನವಿ ಗುಂಪುಗಾರಿಕೆ ಮಾಡಿ ಗೆದ್ದಿದ್ದಾರೆ. ಇಂತಹ ಗೆಲುವೇ ಬೇಡ” ಎಂದು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಗಾನವಿ, “ಮೊದಲು ಕನ್ನಡ ಕಲಿ, ಶೋಗೋಸ್ಕರ ರಿಲೇಶನ್‌ಷಿಪ್ ಮುರಿದುಕೊಂಡವಳು ನೀನು” ಎಂದು ಹಿಂದಿಯ ‘ಸ್ಪ್ಲಿಟ್ಸ್‌ವಿಲ್ಲಾ’ ಶೋನಲ್ಲಿ ಸೌಂದರ್ಯ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಕೆದಕಿದ್ದಾರೆ.

ತಕ್ಷಣವೇ ತಿರುಗಿಬಿದ್ದ ಸೌಂದರ್ಯ, “8 ವರ್ಷ ರಿಲೇಶನ್‌ಷಿಪ್ ಇಟ್ಟುಕೊಂಡು ಇಲ್ಲಿ ಬಂದು ಏನು ಮಾಡುತ್ತಿದ್ದೀಯಾ ಎಂದು ನಾನು ಹೇಳಬೇಕಾ?” ಎಂದು ಗಾನವಿ ಅವರ ಖಾಸಗಿ ಬದುಕನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆಂಡಾಮಂಡಲವಾದ ಗಾನವಿ, “ನನ್ನ ಪರ್ಸನಲ್ ವಿಚಾರಕ್ಕೆ ಬರಬೇಡ, ಹೊಡೆದು ಸಾಯಿಸ್ತೀನಿ ನಿನ್ನ” ಎಂದು ಏರಿಹೋಗಿದ್ದು, ದೊಡ್ಮನೆಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ.