SK Home Ad
Home ಸಿನಿ ಮಿಲ್ಸ್ ‘ಟಾಕ್ಸಿಕ್’ ಅಖಾಡಕ್ಕೆ ಐವರು ಸುಂದರಿಯರ ಎಂಟ್ರಿ: ನೆಟ್ಟಿಗರ ಪ್ರಶ್ನೆಗೆ ಯಶ್ ಕೊಟ್ಟ ಟಾಂಗ್ ಏನು?; ಇಲ್ಲಿದೇ...

‘ಟಾಕ್ಸಿಕ್’ ಅಖಾಡಕ್ಕೆ ಐವರು ಸುಂದರಿಯರ ಎಂಟ್ರಿ: ನೆಟ್ಟಿಗರ ಪ್ರಶ್ನೆಗೆ ಯಶ್ ಕೊಟ್ಟ ಟಾಂಗ್ ಏನು?; ಇಲ್ಲಿದೇ ಮಾಹಿತಿ

0
23

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತೀವೆ. ಇತ್ತೀಚೆಗಷ್ಟೇ ಚಿತ್ರದಲ್ಲಿನ ಯಶ್ ದ್ವಿಪಾತ್ರಗಳ ಟೀಸರ್ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಆದ್ರೆ ಚಿತ್ರದಲ್ಲಿ ಐವರು ಸ್ಟಾರ್ ನಾಯಕಿಯರಿದ್ದರೂ ಕೇವಲ ಯಶ್ ಪಾತ್ರವನ್ನು ಮಾತ್ರ ಹೈಲೈಟ್ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕಿಸಿದ್ದರು. “ಸಿನಿಮಾದಲ್ಲಿ ಮಹಿಳೆಯರು ಎಲ್ಲಿ?” ಎಂದು ಪ್ರಶ್ನಿಸಿದ್ದ ನೆಟ್ಟಿಗರಿಗೆ ನಟ ಯಶ್ ಈಗ ಖುದ್ದಾಗಿ ಮತ್ತು ಸಖತ್ ಆಗಿಯೇ ಉತ್ತರ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಶ್, “ಮಹಿಳೆಯರು ಬರಲು ತುಸು ಸಮಯ ತೆಗೆದುಕೊಳ್ಳುತ್ತಾರೆ. ನಾಳೆ (ಜುಲೈ 1)ಬರಲಿದ್ದಾರೆ, ನೀವು ಸ್ವಲ್ಪ ಬಿಡುವು ಮಾಡಿಕೊಂಡು ಬನ್ನಿ” ಎಂದು ತಿಳಿಸಿದ್ದಾರೆ. ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್‌ನ ಯೂಟ್ಯೂಬ್ ಚಾನೆಲ್ ಲಿಂಕ್ ಸಹ ಹಂಚಿಕೊಂಡಿದ್ದಾರೆ. ಯಶ್ ಅವ ಪೋಸ್ಟ್ ಪ್ರಕಾರ, ಜುಲೈ 1 ರಂದು ಚಿತ್ರದ ಐದೂ ನಾಯಕಿಯರ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಪವರ್‌ಫುಲ್ ಪಾತ್ರಗಳಲ್ಲಿ ನಾಯಕಿಯರು: ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ಭಾರತೀಯ ಚಿತ್ರರಂಗದ ಐವರು ಖ್ಯಾತ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯು ನಾಯಕಿ ಪ್ರಧಾನವಾಗಿದ್ದು, ಯಶ್ ಅವರಷ್ಟೇ ಪವರ್‌ಫುಲ್ ಪಾತ್ರಗಳಲ್ಲಿ ಈ ನಟಿಯರು ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ.. ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಮಾನ್‌ಸ್ಟರ್ ಮೈಂಡ್ಸ್ ಜಂಟಿಯಾಗಿ ಬಂಡವಾಳ ಹೂಡಿವೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡುತ್ತಿದ್ದರೆ, ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಸಿನಿಮಾಟೊಗ್ರಫಿ ಜವಾಬ್ದಾರಿ ಹೊತ್ತಿದ್ದಾರೆ. ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಆಗಸ್ಟ್ 26 ರಂದು ತೆರೆಕಾಣಲಿದೆ.