SK Home Ad
Home ಸಿನಿ ಮಿಲ್ಸ್ ಯಕ್ಷಗಾನ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಮಗನ ಧಮಾಕಾ: ವೈರಲ್ ಆಯ್ತು ಪುಟ್ಟ ರನ್ವಿತ್ ವಿಡಿಯೋ!

ಯಕ್ಷಗಾನ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಮಗನ ಧಮಾಕಾ: ವೈರಲ್ ಆಯ್ತು ಪುಟ್ಟ ರನ್ವಿತ್ ವಿಡಿಯೋ!

0
19

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ಕರಾವಳಿ ಹಾಗೂ ಮಲೆನಾಡಿನ ಸಂಸ್ಕೃತಿ, ಸಂಪ್ರದಾಯಗಳ ಮೇಲಿರುವ ತಮ್ಮ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೇವಲ ಬೆಳ್ಳಿಪರದೆ ಮೇಲಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಜೀವನದಲ್ಲೂ ಮಣ್ಣಿನ ಸಂಪ್ರದಾಯಗಳನ್ನು ಹಾಸುಹೊಕ್ಕಾಗಿ ರೂಢಿಸಿಕೊಂಡಿರುವ ರಿಷಬ್, ಇದೀಗ ತಮ್ಮ ಪುತ್ರನಿಗೂ ಅದೇ ಸಂಸ್ಕಾರವನ್ನು ಧಾರೆ ಎರೆದಿದ್ದಾರೆ.

ಇತ್ತೀಚೆಗೆ ರಿಷಬ್ ಶೆಟ್ಟಿ ತಮ್ಮ ಇಡೀ ಕುಟುಂಬದೊಂದಿಗೆ ಸಾಂಪ್ರದಾಯಿಕ ಯಕ್ಷಗಾನ ಮತ್ತು ಶ್ರೀರಾಮ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದ್ದು ರಿಷಬ್ ಮುದ್ದಿನ ಮಗ ರನ್ವಿತ್.

ಹೌದು.. ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ತಮ್ಮ ಪುತ್ರ ರನ್ವಿತ್‌ಗೆ ಯಕ್ಷಗಾನದ ಸಾಂಪ್ರದಾಯಿಕ ಬಣ್ಣ ಹಚ್ಚಿ ವೇದಿಕೆಗೆ ಪರಿಚಯಿಸಿದ್ದಾರೆ. ಹಾಗೇ ಈ ಮಧುರ ಕ್ಷಣದ ವಿಡಿಯೋವನ್ನ ತಮ್ಮ ಅಧೀಕೃತ ಖಾತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಡಿದ್ದಾರೆ.

ಅಲ್ಲದೇ.. ಕರಾವಳಿಯ ಆಚರಣೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದ ‘ಕಾಂತಾರ’ ಖ್ಯಾತಿಯ ರಿಷಬ್, ಈಗ ತಮ್ಮ ಮುಂದಿನ ಪೀಳಿಗೆಗೂ ಕಲೆಯ ಪರಂಪರೆಯನ್ನು ದಾಟಿಸುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಾರೆ… ಯಕ್ಷಗಾನ ಪ್ರಸಂಗವೊಂದರಲ್ಲಿ ರನ್ವಿತ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದು, ಬಣ್ಣದ ಲೋಕಕ್ಕೆ ಪುಟ್ಟ ಹೆಜ್ಜೆ ಇಟ್ಟಿದ್ದಾನೆ. ಮಗನಿಗೆ ತಾವೇ ಸ್ವತಃ ಮೇಕಪ್ ಮಾಡುತ್ತಿರುವ ಹಾಗೂ ರನ್ವಿತ್ ವೇದಿಕೆಯಲ್ಲಿ ಕಂಗೊಳಿಸುತ್ತಿರುವ ಅಪರೂಪದ ಕ್ಷಣಗಳ ವಿಡಿಯೋವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿರುವ ವಿಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಹಾಗೂ ರಿಷಬ್ ಅಭಿಮಾನಿಗಳು ಪುಟ್ಟ ರನ್ವಿತ್ ಅಭಿನಯ ಮತ್ತು ರಿಷಬ್ ಅವರ ಸಂಸ್ಕೃತಿ ಪ್ರೇಮಕ್ಕೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.