SK Home Ad
Home ಸಿನಿ ಮಿಲ್ಸ್ ʻರಾಮರಸʼ ರೌದ್ರಾವತಾರ: ರಣವಿಕ್ರಮ ನಾಯಕಿ ರೀಎಂಟ್ರಿ; ಆದಾ ಶರ್ಮಾ ಪರಾಶಕ್ತಿ!

ʻರಾಮರಸʼ ರೌದ್ರಾವತಾರ: ರಣವಿಕ್ರಮ ನಾಯಕಿ ರೀಎಂಟ್ರಿ; ಆದಾ ಶರ್ಮಾ ಪರಾಶಕ್ತಿ!

0
23

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ ‘ರಾಮರಸ’ ಸಿನಿಮಾ ತನ್ನ ಚಿತ್ರೀಕರಣದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರೇಕ್ಷಕರಿಗೆ ವಿಶಿಷ್ಟ ಹಾಗೂ ಅದ್ಭುತ ಚಿತ್ರಪಟ ಉಡುಗೊರೆಯಾಗಿ ನೀಡಲು ಸಜ್ಜಾಗಿರುವ ಚಿತ್ರತಂಡ, ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.

ಈಗಾಗಲೇ ಬೃಹತ್ ತಾರಾಗಣದಿಂದ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ಇದೀಗ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ, ರಣವಿಕ್ರಮ ಚಿತ್ರದ ನಾಯಕಿ ಆದಾ ಶರ್ಮಾ ‘ರಾಮರಸ’ ಬಳಗವನ್ನು ಸೇರಿಕೊಂಡಿದ್ದಾರೆ. ತಮ್ಮ ವೈವಿಧ್ಯಮಯ ಅಭಿನಯಕ್ಕೆ ಹೆಸರಾಗಿರುವ ನಟಿ, ಈ ಸಿನಿಮಾದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಚಿತ್ರದ ಕಥಾಹಂದರವು ದಶ ಮಹಾವಿದ್ಯೆಯ ತತ್ತ್ವ ಹಾಗೂ ಪರಾಶಕ್ತಿಯ ಲೀಲೆಯನ್ನು ಆಧರಿಸಿದೆ. ಸೃಷ್ಟಿ, ಸ್ಥಿತಿ ಮತ್ತು ಲಯದ ಮೌಲ್ಯಗಳನ್ನು ಸಾರುವ ತಾಯಿಯ ಸ್ವರೂಪವು ಈ ಸಿನಿಮಾದಲ್ಲಿ ಯಾವ ರೂಪದಲ್ಲಿ ಅನಾವರಣಗೊಳ್ಳಲಿದೆ ಎಂಬುದು ಕಥೆಯ ಮುಖ್ಯ ಆಕರ್ಷಣೆಯಾಗಿದೆ.

ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ವಿಜೇತ ಕಾರ್ತಿಕ್ ಮಹೇಶ್, ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್ ಮತ್ತು ನಟಿ ಹೆಬ್ಬಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೈವಿಕ ಸ್ಪರ್ಶ ಮತ್ತು ಸಾಹಸಮಯ ಕಥಾಹಂದರ ಹೊಂದಿರುವ ‘ರಾಮರಸ’ ಶೀಘ್ರದಲ್ಲೇ ಬೆಳ್ಳಿಪರದೆಗೆ ಬರಲು ಸಿದ್ಧವಾಗುತ್ತಿದೆ.