‘ಮಹಾಕಾಳಿ’ಯಲ್ಲಿ ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ: ಫಸ್ಟ್ ಲುಕ್ ರಿಲೀಸ್
ಬೆಂಗಳೂರು: ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ (PVCU) ಬಹುನಿರೀಕ್ಷಿತ ಚಿತ್ರ ‘ಮಹಾಕಾಳಿ’ ಇದೀಗ ಹೊಸ ಕಾರಣಕ್ಕೆ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರು ಪೌರಾಣಿಕ ಪಾತ್ರ ಶುಕ್ರಾಚಾರ್ಯನಾಗಿ ಕಾಣಿಸಿಕೊಳ್ಳಲಿದ್ದು, ಅವರ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆಯಾಗಿದೆ.
ಶುಕ್ರಾಚಾರ್ಯನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅವರ ವಿಭಿನ್ನ ಗೆಟಪ್ ಹಾಗೂ ಗಂಭೀರ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಚಿತ್ರತಂಡ ಶುಕ್ರಾಚಾರ್ಯನ ‘ವಾರ್ ಕ್ರೈ’ಯನ್ನೂ ಪರಿಚಯಿಸಿದ್ದು, ಪೌರಾಣಿಕ ಹಿನ್ನೆಲೆಯ ಕಥೆಯನ್ನು ಭವ್ಯ ದೃಶ್ಯ ವೈಭವದೊಂದಿಗೆ ಕಟ್ಟಿಕೊಡುವ ಸುಳಿವು ನೀಡಿದೆ.
‘ಮಹಾಕಾಳಿ’ ಚಿತ್ರಕ್ಕೆ ಪ್ರಶಾಂತ್ ವರ್ಮಾ ಕಥೆ, ಪರಿಕಲ್ಪನೆ ಹಾಗೂ ಸೃಜನಾತ್ಮಕ ರೂಪುರೇಷೆ ನೀಡಿದ್ದಾರೆ. ಪೂಜಾ ಕೊಲ್ಲೂರು ನಿರ್ದೇಶನದ ಈ ಚಿತ್ರದಲ್ಲಿ ಶ್ರೀಯಾ ರೆಡ್ಡಿ, ಭೂಮಿ ಶೆಟ್ಟಿ, ರೋಹಿತ್ ಸರಾಫ್ ಸೇರಿದಂತೆ ಹಲವು ಪ್ರಮುಖ ನಟರು ಅಭಿನಯಿಸುತ್ತಿದ್ದಾರೆ.
ಆರ್.ಕೆ. ದುಗ್ಗಲ್ ಪ್ರಸ್ತುತಪಡಿಸುತ್ತಿರುವ ಚಿತ್ರವನ್ನು ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ನಿರ್ಮಿಸುತ್ತಿದ್ದಾರೆ. ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರತಂಡ ಈಗಾಗಲೇ ‘ಮಹಾಕಾಳಿ’ಯ ಥಿಯೇಟ್ರಿಕಲ್ ಬಿಡುಗಡೆ ದಿನಾಂಕವನ್ನು 2027ರ ಜನವರಿ 8 ಎಂದು ಘೋಷಿಸಿದೆ. ಅಕ್ಷಯ್ ಖನ್ನಾ ಅವರ ಶುಕ್ರಾಚಾರ್ಯನ ಪಾತ್ರವು ಸಿನಿಮಾದಲ್ಲಿ ಪ್ರಮುಖ ತಿರುವು ನೀಡುವ ಸಾಧ್ಯತೆ ಇರುವುದರಿಂದ, ಚಿತ್ರದ ಮುಂದಿನ ಅಪ್‌ಡೇಟ್‌ಗಳತ್ತ ಸಿನಿಪ್ರಿಯರ ಗಮನ ನೆಟ್ಟಿದೆ.
- ಉಪಚುನಾವಣೆ : ಬಂಗಾಳದಲ್ಲಿ BJP, ತಮಿಳುನಾಡಿನಲ್ಲಿ TVK ಮುನ್ನಡೆ
- ಬಿಗ್ ಬಾಸ್ 13: ‘ಆತ್ಮಗೌರವ ಮುಖ್ಯ, ಶೋ ತೊರೆಯುವೆ’ ಎಂದ ಗಗನ್ ಚಿನ್ನಪ್ಪ; ವೀಕ್ಷಕರಿಗೆ ಶಾಕ್!
- ಬಿಗ್ ಬಾಸ್ 13: ಅಶ್ಲೀಲ ಪದ ಬಳಸಿ ಸಿಕ್ಕಿಬಿದ್ದ ಮಂಜು; ಸುದೀಪ್ರಿಂದ ರೆಡ್ ಕಾರ್ಡ್ ಎಲಿಮಿನೇಷನ್?
- ಕರೆಂಟ್ ಹೋದರೆ ಮೊಬೈಲ್ ಟಾರ್ಚ್ ಆಸರೆ! ಬಾಣಂತಿಯರ ವಾರ್ಡ್ನಲ್ಲಿ ಮೂಲಸೌಕರ್ಯ ಕೊರತೆ
- ಬಿಗ್ ಬಾಸ್ 13: ಟಾಸ್ಕ್ನಲ್ಲಿ ಮಂಜನಿಂದ ಅಸಭ್ಯ ಭಾಷೆ ಬಳಕೆ; ‘ಕಿಚ್ಚ’ನ ಪಂಚಾಯಿತಿಗೆ ಕಾದ ವೀಕ್ಷಕರು!






















