SK Home Ad
Home ಸಿನಿ ಮಿಲ್ಸ್ ‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್‌ನಿಂದ ಅರ್ಜಿ ಆಹ್ವಾನ

‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್‌ನಿಂದ ಅರ್ಜಿ ಆಹ್ವಾನ

0
53

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರಿ ಬಜೆಟ್ ಸಿನಿಮಾಗಳ ನಿರ್ಮಾಣದ ಮೂಲಕ ಗಮನ ಸೆಳೆದಿರುವ ನಿರ್ಮಾಣ ಸಂಸ್ಥೆ KVN Productions ಇದೀಗ ತನ್ನ ಕ್ರಿಯೇಟಿವ್ ತಂಡವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. Toxic ಮತ್ತು KD – The Devil ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಚಿತ್ರಗಳನ್ನು ನಿರ್ಮಿಸುತ್ತಿರುವ ಸಂಸ್ಥೆಯು, ಯುವ ತಂತ್ರಜ್ಞರಿಗೆ ಉದ್ಯೋಗಾವಕಾಶ ಕಲ್ಪಿಸಿದೆ.

ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ಸಾಧನೆ ಮಾಡಬೇಕೆಂಬ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಇದನ್ನೂ ಓದಿ: KBJNL ಇಇ ಬಸನಗೌಡ ಮನೆ ಸೇರಿ 7 ಕಡೆ ಲೋಕಾಯುಕ್ತರ ದಾಳಿ

ಯಾವ ವಿಭಾಗಗಳಿಗೆ ಅವಕಾಶ? : ಕೆವಿಎನ್ ಪ್ರೊಡಕ್ಷನ್ಸ್ ತನ್ನ ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್-ಪ್ರೊಡಕ್ಷನ್ ವಿಭಾಗಗಳಿಗಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರನ್ನು ಹುಡುಕುತ್ತಿದೆ. ಕಾನ್ಸೆಪ್ಟ್ ಆರ್ಟ್ (Concept Art), ಕೃತಕ ಬುದ್ಧಿಮತ್ತೆ (Artificial Intelligence – AI), ತ್ರಿಡಿ ವಿನ್ಯಾಸ (3D Design), ಅನಿಮೇಷನ್ (Animation), ಕಂಪೋಸಿಟಿಂಗ್ (Compositing) ಹಾಗೂ ಡಿಜಿಟಲ್ ಕ್ರಿಯೇಟಿವ್ ಡೆವಲಪ್‌ಮೆಂಟ್.

ಸಂಸ್ಥೆಯ ಪ್ರಕಟಣೆಯಲ್ಲಿ, “ನಾವು ನಮ್ಮ ಕ್ರಿಯೇಟಿವ್ ತಂಡವನ್ನು ವಿಸ್ತರಿಸುತ್ತಿದ್ದೇವೆ. ಕಾನ್ಸೆಪ್ಟ್ ಆರ್ಟ್, ಎಐ, 3D, ಅನಿಮೇಷನ್ ಅಥವಾ ಕಂಪೋಸಿಟಿಂಗ್‌ನಲ್ಲಿ ಆಸಕ್ತಿ ಮತ್ತು ಕೌಶಲ್ಯವಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಪ್ರವಾಹ ಪರಿಸ್ಥಿತಿ ಗಂಭೀರ: ಸರ್ಕಾರಕ್ಕೆ R. ಅಶೋಕ್ ನೇರ ಪ್ರಶ್ನೆಗಳು

ಯುವ ಪ್ರತಿಭೆಗಳಿಗೆ ಸುವರ್ಣಾವಕಾಶ : ಭಾರತೀಯ ಚಿತ್ರರಂಗದಲ್ಲಿ ಎಐ, ವರ್ಚುವಲ್ ಪ್ರೊಡಕ್ಷನ್, ವಿಸ್ವಲ್ ಎಫೆಕ್ಟ್ಸ್ (VFX) ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೆವಿಎನ್ ಪ್ರೊಡಕ್ಷನ್ಸ್‌ನ ಈ ನೇಮಕಾತಿ ಪ್ರಕ್ರಿಯೆ ಹೊಸ ಪ್ರತಿಭೆಗಳಿಗೆ ದೊಡ್ಡ ಅವಕಾಶವಾಗಿ ಪರಿಣಮಿಸಿದೆ. ಕನ್ನಡ ಚಿತ್ರರಂಗದಲ್ಲಿ ತಂತ್ರಜ್ಞಾನ ಆಧಾರಿತ ಸಿನಿಮಾ ನಿರ್ಮಾಣದತ್ತ ಹೆಚ್ಚು ಒತ್ತು ನೀಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್, ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯೂ ಇದೆ.

‘ಟಾಕ್ಸಿಕ್’ ಮೇಲೆ ಭಾರಿ ನಿರೀಕ್ಷೆ : Yash ಅಭಿನಯದ ‘ಟಾಕ್ಸಿಕ್’ ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ‘ಟಾಕ್ಸಿಕ್’ ಸೇರದಂತೆ ಹಲವು ಚಿತ್ರಗಳ ಮೂಲಕ ಕೆವಿಎನ್ ಪ್ರೊಡಕ್ಷನ್ಸ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಗುರುತನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್

ಈ ನಡುವೆ ಸಂಸ್ಥೆಯು ಕ್ರಿಯೇಟಿವ್ ವಿಭಾಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಸಿನಿಮಾ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಿಕೊಳ್ಳಲು ಬಯಸುವ ಯುವಕರಿಗೆ ಸಂತಸದ ಸುದ್ದಿಯಾಗಿದೆ.