SK Home Ad
Home ಸಿನಿ ಮಿಲ್ಸ್ ‘ಮೇಕಪ್ ಮಾಡ್ಕೊಂಡ್ ಕೂತ್ರೆ ಕೆಲ್ಸ ಮಾಡೋರ್ಯಾರು?ʼ: ಸೌಂದರ್ಯ ಮೇಲೆ ಜಗ್ಗ ಫುಲ್‌ ಗರಂ!

‘ಮೇಕಪ್ ಮಾಡ್ಕೊಂಡ್ ಕೂತ್ರೆ ಕೆಲ್ಸ ಮಾಡೋರ್ಯಾರು?ʼ: ಸೌಂದರ್ಯ ಮೇಲೆ ಜಗ್ಗ ಫುಲ್‌ ಗರಂ!

0
28

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದ್ದ ಸ್ಪರ್ಧಿ ಜಗ್ಗ ಮಮ್ಮಿ, ಇದೀಗ ಏಕಾಏಕಿ ಗರಂ ಆಗುವ ಮೂಲಕ ದೊಡ್ಮನೆಯಲ್ಲಿ ಹಂಗಾಮಾ ಸೃಷ್ಟಿಸಿದ್ದಾರೆ. ಮನೆಯ ಕೆಲಸಗಳ ಹಂಚಿಕೆ ವಿಚಾರವಾಗಿ ಜಗ್ಗ ಹಾಗೂ ಮಹಿಳಾ ಸ್ಪರ್ಧಿಗಳ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ.

ಮೊದಲ ವಾರದಲ್ಲಿ ಬಿಗ್‌ಬಾಸ್ ಮನೆಯ ಹೆಚ್ಚಿನ ಕೆಲಸಗಳನ್ನು ಒಬ್ಬರೇ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ತಗೆದುಕೊಂಡಿದ್ದ ಜಗದೀಶ್, ಇದೀಗ ಎಲ್ಲರಿಗೂ ಕೆಲಸ ಹಂಚಲು ಮುಂದಾಗಿದ್ದಾರೆ. ಆದ್ರೆ ಕೆಲಸ ಮಾಡದೆ ಮಹಿಳಾ ಸ್ಪರ್ಧಿಗಳು ಮೇಕಪ್ ಮಾಡುತ್ತಾ ಕುಳಿತಿದ್ದನ್ನು ಕಂಡ ಜಗ್ಗ, “ಬೆಳಗ್ಗೆಯಿಂದ ನಾನು ಪಾತ್ರೆ ತೊಳೆಯುತ್ತಿದ್ದೇನೆ. ಹೀಗೆ ಮೇಕಪ್ ಮಾಡಿಕೊಂಡು ಕೂತರೆ ಹೇಗೆ? ಇಲ್ಲಿಗೆ ಬಂದಿರೋದು ಲೇಜಿಯಾಗಿ ಇರೋಕಾ ಅಥವಾ ಸ್ಟೈಲ್ ಮಾಡೋಕಾ?” ಎಂದು ನೇರವಾಗಿಯೇ ಸೌಂದರ್ಯ, ಕಾವ್ಯ, ಸಂಗೀತಾ, ಹಾಗೂ ವೈಷ್ಣವಿಯನ್ನ ಪ್ರಶ್ನಿಸಿದ್ದಾರೆ.

ಈ ವೇಳೆ ಕಣ್ಣಿಗೆ ಮಸ್ಕರಾ ಹಾಕಿಕೊಳ್ಳುತ್ತಿದ್ದ ಸೌಂದರ್ಯ ಶೆಟ್ಟಿ ಕೈಹಿಡಿದು ಜಗ್ಗ ಕರೆಯಲು ಯತ್ನಿಸಿದ್ದು, ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಪರ್ಧಿ ಮಂಜ ಮಧ್ಯಪ್ರವೇಶಿಸಿ ಇಬ್ಬರ ಜಗಳ ಬಿಡಿಸಲು ಯತ್ನಿಸಿದರು. ಈ ಹಿಂದೆ ಡೈನಿಂಗ್ ಟೇಬಲ್ ಕ್ಲೀನ್ ಮಾಡುವ ವಿಚಾರಕ್ಕೆ ಗಗನ್ ಜೊತೆ ಗಲಾಟೆ ಮಾಡಿಕೊಂಡಿದ್ದ ಜಗ್ಗ, ಇದೀಗ ಮಹಿಳಾ ಸ್ಪರ್ಧಿಗಳ ಮೇಲೂ ಕೆಂಗಣ್ಣು ಬೀರಿದ್ದಾರೆ. ಸದಾ ಶಾಂತವಾಗಿದ್ದ ಜಗದೀಶ್‌ ಈ ವಾರ ರೌದ್ರ ಅವತಾರ ನೋಡಿ ವೀಕ್ಷಕರು ತೀವ್ರ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.