SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಹಸುಗೂಸಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಹಸುಗೂಸಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

0
229

ಉತ್ತರ ಕನ್ನಡ: ಎಂಟು ತಿಂಗಳ ಹಸುಗೂಸಿನೊಂದಿಗೆ ತಾಯಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ತಾಲ್ಲೂಕಿನ ಕಬಗಾರ ಗ್ರಾಮದಲ್ಲಿ ನಡೆದಿದೆ.

ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೆಗೋಡ ಗ್ರಾಮದ ಸುಮಿತ್ರಾ (27) ಹಸುಗೂಸಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ತವರು ಮನೆಯಾದ ಕಬಗಾರ ಗ್ರಾಮದಲ್ಲಿ ಹೆರಿಗೆಗೆ ತೆರಳಿ ಕೆಲ ದಿನದಿಂದ ಅಲ್ಲಿಯೇ ವಾಸವಿದ್ದರು. ಸೋಮವಾರ ಮುಂಜಾನೆ ಮಗುವಿನೊಂದಿಗೆ ತೆರಳಿ ಮನೆ ಸಮೀಪದ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಹಿಳೆ ಮಾನಸಿಕವಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ಕುಟುಂಬಸ್ಥರು ತಿಳಿಸಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.