Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ಜೋಕಾಲಿ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವು

ಜೋಕಾಲಿ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವು

0
100

ಶಿವಮೊಗ್ಗ: ಜೋಕಾಲಿ ಆಡುತ್ತಲೇ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 9 ವರ್ಷದ ಪ್ರಣಮ್ಯ ಮೃತ ಬಾಲಕಿ ಎಂದು ಗುರುತಿಸಲಾಗಿದೆ.

ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿಯಾಗಿದ್ದ ಪ್ರಣಮ್ಯ ಬೇಸಿಗೆ ರಜೆಗೆಂದು ಚಿಕ್ಕಮ್ಮನ ಮನೆ ಲಕ್ಕಿನಕೊಪ್ಪಕ್ಕೆ ಬಂದಿದ್ದಳು. ಕಳೆದ ಏ. 20ರಂದು ರೂಮ್‌ನಲ್ಲಿ ಕಟ್ಟಿದ್ದ ಜೋಕಾಲಿಯನ್ನು ಆಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದ ಪ್ರಣಮ್ಯ ಅವಳಿಗೆ ಇದ್ದಕ್ಕಿಂದಂತೆ ಹಗ್ಗ ಕುತ್ತಿಗೆಗೆ ಬಿಗಿದುಕೊಂಡು ಉಸಿರುಗಟ್ಟಿದೆ. ಕುಟುಂಬದವರು ಬಾಗಿಲು ತೆರೆಯುವಷ್ಟರಲ್ಲಿ ಬಾಲಕಿಯೂ ಪ್ರಾಣ ಕಳೆದುಕೊಂಡಿದ್ದಾಳೆ.